ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ 2025-2026ರ ಶೈಕ್ಷಣಿಕ ವರ್ಷದಲ್ಲಿ ಕಾನೂನು ಪದವಿ ತರಗತಿಗಳನ್ನು ಆರಂಭಿಸಲಿದೆ.

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಪಕುಲಪತಿ ಡಾ.ಪ್ರವೀಣ್ ಮಾರ್ಟಿಸ್ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾನೂನು ಶಿಕ್ಷಣ ಆರಂಭಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ ದೊರಕಿದೆ ಎಂದ್ರು. ಈ ವರ್ಷದಿಂದ ಮೂರು ವರ್ಷದ ಎಲ್.ಎಲ್.ಬಿ ಮತ್ತು ಐದು ವರ್ಷಗಳ ಬಿಬಿಎ ಎಲ್.ಎಲ್.ಬಿ .ಯನ್ನು ಆರಂಭಿಸಲಾಗುತ್ತಿದೆ. ಸಮಗ್ರ ಕಾನೂನು ಅಧ್ಯಯನಕ್ಕಾಗಿ ಎಲ್ಲಾ ಮೂಲ ಸೌಕರ್ಯಗಳನ್ನು ರೂಪಿಸಲಾಗಿದೆ ಎಂದವರು ವಿವರಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಡಾ.ರೊನಾಲ್ಡ್ ನಜರತ್,ಡಾ.ಆಲ್ವಿನ್ ಡೇಸಾ ಉಪಸ್ಥಿತರಿದ್ರು.



