ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಆವರಿಸಿದ ಹೊಗೆಯಿಂದಾಗಿ ಕೂಡಲೇ ಬಸ್ ಚಾಲಕ ರಸ್ತೆಯಲ್ಲಿಯೇ ಬಸ್ಸನ್ನ ನಿಲ್ಲಿಸಿದ್ದಾನೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಸಮೀಪದ ಶಿರಾಡಿಘಾಟ್ ರಸ್ತೆಯಲ್ಲಿ ಘಟನೆ ನಡೆದಿದೆ.

ಬಸ್ ತುಂಬೆಲ್ಲಾ ಅವರಸಿದ ದಟ್ಟನೆ ಹೊಗೆಯಿಂದಾಗಿ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಸಿ ಸ್ಲೀಪರ್ ಕೋಚ್ ಬಸ್ ಇದಾಗಿದ್ದು, ಟರ್ಬೋ ಬ್ಲಾಸ್ಟ್ ಆಗಿ ಬಸ್‌ನಲ್ಲಿ ಹೊಗೆ ಆವರಿಸಿದೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.



