ದಕ್ಷಿಣ ಕನ್ನಡ :ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ, ಗುಂಡ್ಯಡ್ಕ, ಮೂಡಬಿದಿರೆ ಇಲ್ಲಿ ಪುರುಷೋತ್ತಮ ಮಾಸ (ಅಧಿಕ ಶ್ರಾವಣ ) ಪ್ರಯುಕ್ತ ದೇವಸ್ಥಾನದಲ್ಲಿ ತಾ. 18 – 7 – 2023 ರಿಂದ ತಾ 16-8-2023 ರವರೆಗೆ ನಿರಂತರ ಜರುಗುವ ಧಾರ್ಮಿಕ , ಸಾಂಸ್ಕೃತಿಕ ಹಾಗೂ ಅನ್ನದಾನಾದಿ ಕಾರ್ಯಕ್ರಮಗಳ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ ಉದ್ಘಾಟನಾ ಸಮಾರಂಭ ನಡೆಯಿತು, ಎಮ್. ಗಿರಿಧರ ಭಟ್, ಪುರೋಹಿತರು, ಜ್ಯೋತಿಷಿಗಳು, – ಶ್ರೀ ರಾಧಾಕೃಷ್ಣ ದೇವಸ್ಥಾನ, ಮಂಗಳೂರು ಇವರಿಂದ.
ಶುಭಾಶಂಸನೆ – ಶ್ರೀಯುತ ಡಾ| ಸತ್ಯನಾರಾಯಣ ಆಚಾರ್ಯ. ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು.
ಗೌರವ ಉಪಸ್ಥಿತಿ- ಶ್ರೀಯುತ ಪಾಂಡುರಂಗ ಭಟ್ ಸಪ್ರೆ ಗುಂಡ್ಯಡ್ಕ , ರಾಮಚಂದ್ರ ಭಟ್ಟ ನಾಟೆಕರ್ ಅಧ್ಯಕ್ಷರು ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ,
ರಾಮಚಂದ್ರ ಭಟ್ ನಾಟೇಕರ್ ಅಧ್ಯಕ್ಷರು , ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ , ಶ್ರೀನಿವಾಸಪುರ- ಗುಂಡ್ಯಡ್ಕ . ಮಹದೇವ ಭಟ್ ಪರಾಡ್ಕರ್, ಆಡಳಿತ ಮೊಕ್ತೇಸರರು, ಶ್ರೀ ದತ್ತಾತ್ರೇಯ ಭಜನಾ ಮಂದಿರ, ಕೇಮಾರು
ವೇದಮೂರ್ತಿ ಜಯರಾಮ ಭಟ್ ಚಿಂಚಳ್ಕರ್, ಪುರೋಹಿತರು. ಪ್ರಧಾನ ಕಾಶೀಸದನ, ಡೊಂಗರಕೇರಿ, ಮಂಗಳೂರು. ರಾಮಚಂದ್ರ ಭಟ್ ದೇವ್ ಜಿ, ನ್ಯಾಯ ತೋಟ ಕಾಂತಾವರ
ಈಶ್ವರ ಭಟ್, ಪ್ರಧಾನ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಅಲಂಗಾರು . ಕಿರಣ ಮಂಜನಬೈಲು, ಮೊಕ್ತೇಸರರು ಶ್ರೀ ಸೀತಾರಾಮಚಂದ್ರ ದೇವಸ್ಥಾನ ಅಶ್ವತ್ಥಪುರ .
ಕೆ. ಆರ್.ಪಂಡಿತ್. ನ್ಯಾಯವಾದಿಗಳು ಮೂಡಬಿದ್ರೆ.
ಡಾ| ಮಂದಾರ ರಾಜೇಶ್ ಭಟ್, ಪತ್ರಕರ್ತರು ಪಾಂಡರಂಗ ಲಾಗ್ಟನ್ ಕರ್ ಕರಾಡ ಬ್ರಾಹ್ಮಣ ಸಮಾಜ ಸುಧ್ಧಾರಕ ಸಂಘ ಉಡುಪಿ ಘಟಕದ ಅಧ್ಯಕ್ಷರು.
ಪ್ರಭಾಕರ್ ಎನ್ ಪರಾಡ್ಕರ್ ಮೂಡಬಿದ್ರೆ. ಹಾಗೂ ಸಮಾಜದ ಬಂಧುಗಳು ಮತ್ತು ಭಕ್ತರು ಉಪಸ್ಥಿತರಿದ್ದರು, ಪುರುಷೋತ್ತಮ ಮಾಸ ಅಂದರೆ ಅಧಿಕ ಶ್ರಾವಣ ಮಾಸದಲ್ಲಿ ನಿರಂತರವಾಗಿ ವಿಠೋಬಾ ರುಕುಮಾರಿ ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಡ್ಕ ಇಲ್ಲಿ ದೇವತಾ ಕಾರ್ಯಗಳು, ಹೋಮ ಹವನಗಳು, ವಿಶೇಷ ಪೂಜೆ,ಭಜನೆ, ಅನ್ನಸಂತರ್ಪಣೆ, ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಸಮಾಜ ಬಾಂಧವರಲ್ಲಿ ವಿನಂತಿಸಿದ್ದಾರೆ.





