ಅಪರೇಷನ್ ಸಿಂದೂರ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಭಾರತ ಇನ್ನೂ ಘೋಷಿಸಿಲ್ಲ. ಈಗ ಆಗಿರುವುದೆಂದರೆ ಕಾರ್ಯಾಚರಣೆಗಳಿಗೆ ಸೂಕ್ಷ್ಮ ವಿಶ್ರಾಂತಿ ದಕ್ಕಿದೆ ಅಷ್ಟೇ – ಕೆಲವರು ಇದನ್ನು ಕದನವಿರಾಮ ಎಂದು ಕರೆಯಬಹುದು, ಆದರೆ ಸೇನೆಯ ನಾಯಕರಾದವರು ಈ ಶಬ್ದವನ್ನು ಉಲ್ಲೇಖಿಸುವುದನ್ನು ತಪ್ಪಿಸುತ್ತಿದ್ದಾರೆ. ಸಮರ ನಡೆಸುವ ದೃಷ್ಟಿಯಿಂದ ಗಮನಿಸಿದರೆ, ಇದು ಕೇವಲ ವಿರಾಮ ಅಥವಾ ಸ್ಥಗಿತವಲ್ಲ; ಇದು ಅಪರೂಪದ ಮತ್ತು ನಿಸ್ಸಂದಿಗ್ಧವಾಗಿಯೂ ಸೇನೆಯ ಜಯದ ನಂತರದ ವ್ಯೂಹಾತ್ಮಕ ಹಿಡಿತವಾಗಿದೆ.

ನಿಖರವಾದ ಸೇನಾ ಕಾರ್ಯಾಚರಣೆಯು ನಾಲ್ಕು ದಿನಗಳ ನಂತರ, ಅದು ತನ್ನ ಉದ್ದೇಶ ಸಾಧನೆಯಲ್ಲಿ ಪೂರ್ಣಗೊಂಡಿದೆ. ಭಾರತ ಭಾರೀ ಗೆಲುವನ್ನು ಸಾಧಿಸಿದೆ. ಆಪರೇಶನ್ ಸಿಂದೂರ ತನ್ನ ವ್ಯೂಹಾತ್ಮಕ ಗುರಿಗಳನ್ನು ಸಾಧಿಸಿದ್ದು ಮಾತ್ರವಲ್ಲ ಅದನ್ನೂ ಮೀರಿದ ಸಾಧನೆ ಮಾಡಿದೆ. ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶ ಮಾಡಿದೆ, ಸೇನಾ ಹಿರಿಮೆಯನ್ನು ತೋರಿಸಿದೆ, ನಿರೋಧಕತ್ವವನ್ನು ಪುನಸ್ಥಾಪಿಸಿದೆ ಮತ್ತು ಹೊಸ ರಾಷ್ಟ್ರೀಯ ಭದ್ರತಾ ಸಿದ್ಧಾಂತವನ್ನು ಅನಾವರಣ ಮಾಡಿದೆ. ಇದು ಸಾಂಕೇತಿತ ಶಕ್ತಿ ಅಲ್ಲ. ಇದು ನಿರ್ಣಯಾತ್ಮಕ ಶಕ್ತಿ, ಸ್ಪಷ್ಟವಾಗಿ ಅನ್ವಯಿಕವಾದುದು. 2025 ರ ಏಪ್ರಿಲ್ 22ರಂದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಭಾರತೀಯ ನಾಗರಿಕರನ್ನು, ಹೆಚ್ಚಾಗಿ ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡಲಾಯಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಅಂಗಸAಸ್ಥೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿತು. ದಶಕಗಳಿಂದ ಈ ಗುಂಪು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಬೆಂಬಲಿತವಾಗಿದೆ. ಆದರೆ ಭಾರತದ ನಿಲುವು ಈ ಬಾರಿ ಹಿಂದಿನ ದಾಳಿಗಳಿಗಿಂತ ಭಿನ್ನವಾಗಿತ್ತು, ಈ ಬಾರಿ ಭಾರತ ಕಾಯಲಿಲ್ಲ. ಅದು ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೆ ಮನವಿ ಮಾಡಲಿಲ್ಲ ಅಥವಾ ರಾಜತಾಂತ್ರಿಕ ಕ್ರಮಗಳಿಗೆ ಮನವಿ ಮಾಡಲಿಲ್ಲ. ಅದು ಯುದ್ಧ ವಿಮಾನಗಳನ್ನು ಕಳುಹಿಸಿತು. ಮೇ 7 ರಂದು, ಭಾರತವು ಸಿಂದೂರ ಕಾರ್ಯಾಚರಣೆಯನ್ನು ಆರಂಭ ಮಾಡಿತು , ಇದು ತ್ವರಿತವಾಗಿ ಮತ್ತು ಖಚಿತವಾಗಿ ನಿಖರ ಗುರಿಯೊಂದಿಗೆ ಕೈಗೊಂಡ ಸೇನಾ ಅಭಿಯಾನವಾಗಿದೆ. ಭಾರತೀಯ ವಾಯುಪಡೆಯು ಪಾಕಿಸ್ತಾನದ ಒಳಗೆ ನುಗ್ಗಿ 9 ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿ ಇಟ್ಟು ನಾಶ ಮಾಡಿತು, ಜೈಸ್ಹ್-ಇ-ಮಹ್ಮದ್ ಮತ್ತು ಲಷ್ಕರ್-ಇ-ತೈಬಾಗಳ ಕೇಂದ್ರ ಕಚೇರಿಗಳು, ಕಾರ್ಯಾಚರಣಾ ತಾಣಗಳು ಇದರಲ್ಲಿ ಸೇರಿವೆ. ಸಂದೇಶ ಬಹಳ ಖಚಿತವಾಗಿತ್ತು: ಪಾಕಿಸ್ತಾನದ ನೆಲದ ಮೇಲಿನಿಂದ ಆರಂಭವಾದ ಉಗ್ರರ ದಾಳಿಗಳು ಇದೀಗ ಯುದ್ಧದ ಕೃತ್ಯಗಳಾಗಿ ಪರಿಗಣಿತವಾಗುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ತತ್ವ ಸಿದ್ಧಾಂತವನ್ನು ಯಾವುದೇ ತಪ್ಪುಗಳಿಲ್ಲದೇ ಸುಸ್ಪಷ್ಟವಾಗಿ ಮಂಡಿಸಿದ್ದಾರೆ: “ಭಾರತ ಪರಮಾಣು ಅಸ್ತ್ರದ ಬೆದರಿಕೆಯನ್ನು ಅಂದರೆ ಅದರ ಹೆಸರಿನಲ್ಲಿ ಮಾಡುವ ಬ್ಲ್ಯಾಕ್ ಮೇಲ್ ನ್ನು ಸಹಿಸುವುದಿಲ್ಲ. ಅಣ್ವಸ್ತ್ರದ ಬ್ಲ್ಯಾಕ್ ಮೇಲ್ ನಡಿಯಲ್ಲಿ ಮತ್ತು ಅದರ ಹೆಸರಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉಗ್ರವಾದಿಗಳ ಅಡಗುದಾಣಗಳ ಮೇಲೆ ಭಾರತ ನಿಖರವಾಗಿ ಮತ್ತು ನಿರ್ಣಾಯಕವಾಗಿ ದಾಳಿ ಮಾಡುತ್ತದೆ.” ಇದು ವ್ಯೂಹಾತ್ಮಕ ಸಿದ್ಧಾಂತದ ಅನಾವರಣ. ಮೋದಿಯವರು ಹೇಳಿದಂತೆ, “ಉಗ್ರವಾದ ಮತ್ತು ಮಾತುಕತೆ ಜೊತೆಯಾಗಿ ಸಾಗಲಾರದು. ನೀರು ಮತ್ತು ರಕ್ತ ಜೊತೆಯಾಗಿ ಹರಿಯಲಾಗದು.” ಮೇ 7ರಂದು ಪಾಕಿಸ್ತಾನದ ಭೂಭಾಗದ ಒಳಗೆ ಒಂಬತ್ತು ನಿಖರವಾದ ಗುರಿಗಳನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸಲಾಯಿತು. ಗುರಿಗಳಲ್ಲಿ ಬಹಾವಲ್ಪುರ, ಮುರಿಡ್ಕೆ, ಮುಜಾಫರಾಬಾದ್ ಮತ್ತು ಇತರ ಸ್ಥಳಗಳಲ್ಲಿಯ ಪ್ರಮುಖ ಉಗ್ರವಾದಿ ತರಬೇತಿ ಶಿಬಿರಗಳು ಮತ್ತು ಸಾರಿಗೆ ಕೇಂದ್ರಗಳು ಒಳಗೊಂಡಿದ್ದವು. ಮೇ 8ರಂದು ಪಾಕಿಸ್ತಾನವು ಭಾರತದ ಪಶ್ಚಿಮ ರಾಜ್ಯಗಳಲ್ಲಿ ಭಾರೀ ಡ್ರೋನ್ ದಾಳಿಯೊಂದಿಗೆ ಪ್ರತಿಕ್ರಿಯಿಸಿತು. ಭಾರತದ ಬಹು-ಸ್ತರದ ವಾಯು ರಕ್ಷಣಾ ಜಾಲ ದೇಶೀಯವಾಗಿ ನಿರ್ಮಿಸಲಾದುದು ಮತ್ತು ಇಸ್ರೇಲ್ ಹಾಗು ರಷ್ಯಾದ ವ್ಯವಸ್ಥೆಗಳ ಮೂಲಕ ಸಂಯೋಜಿಸಿದುದು ಅವೆಲ್ಲವನ್ನೂ ನಿಷ್ಕ್ರಿಯಗೊಳಿಸಿತು. ಮೇ 9 ರಂದು ಭಾರತವು ಆರು ಪಾಕಿಸ್ತಾನಿ ಮಿಲಿಟರಿ ವಾಯುನೆಲೆಗಳ ಮೇಲೆ ಮತ್ತು ಯು.ಎ.ವಿ. ಸಮನ್ವಯ ತಾಣಗಳ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸಿತು. ಮೇ 10 ರಂದು ಗುಂಡು ಹಾರಿಸುವ, ದಾಳಿಯ ಕಾರ್ಯಾಚರಣೆಗಳಿಗೆ ತಾತ್ಕಾಲಿಕ ನಿಲುಗಡೆ ನೀಡಲಾಯಿತು. ಭಾರತ ಇದನ್ನು ಕದನ ವಿರಾಮ ಎಂದು ಕರೆಯಲಿಲ್ಲ. ಭಾರತೀಯ ಸೇನೆ ಇದನ್ನು ದಾಳಿಯ ಸ್ಥಾಗಿತ್ಯ (ಸ್ಟಾಪೇಜ್ ಆಫ್ ಫೈರಿಂಗ್) ಎಂದು ಉಲ್ಲೇಖಿಸಿತು – ಇದು ಪರಿಸ್ಥಿತಿಯ ಮೇಲೆ ವ್ಯೂಹಾತ್ಮಕ ನಿಯಂತ್ರಣವನ್ನು ಸಾಧಿಸುವ ಅರ್ಥಪೂರ್ಣ ಮತ್ತು ಉದ್ದೇಶಪೂರ್ವಕ ಆಯ್ಕೆಯಾಗಿತ್ತು. ಇದು ಕೇವಲ ತಂತ್ರಾತ್ಮಕ ಯಶಸ್ಸು ಮಾತ್ರವಲ್ಲ. ಇದು ಯುದ್ಧಭೂಮಿಯಲ್ಲಿ ಬೆಂಕಿ ಉಗುಳುತ್ತಿರುವಾಗಲೇ ತನ್ನ ತತ್ವ ಸಿದ್ಧಾಂತವನ್ನು ಜಾರಿ ಮಾಡುವ ಮಾದರಿ.



