ಪುತ್ತೂರು ಕಬಕದಲ್ಲಿ ಮೊನ್ನೆ ನಡೆದ ಸರಕಾರಿ ಬಸ್ ಚಾಲಕನ ಬೇಜವಾಬ್ದಾರಿಯಿಂದ ಅಪಘಾತದಲ್ಲಿ ಮರಣ ಹೊಂದಿದ ದಿವಂಗತ ಅರುಣ್ ಬೋರುಗುಡ್ಡೆಯವರ ಮನೆಗೆ ಇಂದು ಬಂಟ್ವಾಳ ತಾಲೂಕಿನ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿದ್ದಾರೆ.

ಮೃತರ ಪತ್ನಿ ಹಾಗೂ ತಾಯಿ ಮತ್ತು ಮಗನಿಗೆ ಸಾಂತ್ವನ ಹೇಳಿದ್ರು. ಈ ಸಂದರ್ಭದಲ್ಲಿ ಅವರು ಅರುಣ್ ಬೊರು ಗುಡ್ಡೆಯವರ ಮಗನ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ತಾನು ಭರಿಸುವುದಾಗಿ ತಿಳಿಸಿದ್ರು. ಮತ್ತು ಅಪಘಾತದಿಂದ ಸಿಗುವ ಪರಿಹಾರ ಧನವನ್ನು ಆದಷ್ಟು ಬೇಗ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ತಿಳಿಸಿದ್ದಾರೆ.



