ಮನೆಗೆ ಬಂದ ಇಬ್ಬರು ಬುರ್ಖಾಧಾರಿ ಮಹಿಳೆಯರು ಕೋಣೆಯಲ್ಲಿ ಮಲಗಿದ್ದ ಮಗುವನ್ನು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಬೆಳಪು ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ.

ಮೊಹಮ್ಮದಾಲಿ ಎಂಬವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದು, ಅದರಲ್ಲಿ ಇನ್ನೊಬ್ಬಳು ಮಹಿಳೆ ಮನೆಯ ಒಳಗೆ ಹೋಗಿ ತೊಟ್ಟಿಲಲ್ಲಿ ಮಲಗಿದ್ದ ಮುಹಮ್ಮದಾಲಿಯ ತಮ್ಮನ ಮಗುವನ್ನು ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಆಗ ಮನೆಯಲ್ಲಿದ್ದ ತಾಬೂರಿಸ್ ಎಂಬವರು ತಡೆದಾಗ ಆಕೆಯನ್ನು ದೂಡಿ, ಮಗುವನ್ನು ನೆಲದಲ್ಲಿ ಬಿಟ್ಟು ಇಬ್ಬರು ಪರಾರಿಯಾದರೆಂದು ದೂರಲಾಗಿದೆ. ಇದರಿಂದ ತಾಬೂರಿಸ್‍ಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.ಈ ಬಗ್ಗೆ ಮಗುವಿನ ತಾಯಿ ಸೀಮಾ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.



