ಕಿನ್ನಿಗೋಳಿ: ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿನ್ನಿಗೋಳಿಯ ರಾಮನಗರಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಉಮೇಶ್ ಆಚಾರ್ಯ(೬೨) ಎಂದು ಗುರುತಿಸಲಾಗಿದೆ, ಬುಧವಾರ ಮುಂಜಾನೆ ರಾಮನಗರದಲ್ಲಿನ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕವಾಗಿ ನೊಂದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಉಮೇಶ್ ಆಚಾರ್ಯ ಅವರು ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿನ ಕೆ ಶ್ರೀಧರ ಆಚಾರ್ಯ ಜ್ಯುವೆಲ್ಲರ್ಸ್ ನ್ನು ಹೊಂದಿದ್ದರು.



