ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸ್ ತನ್ನ ಗೆಲುವು ಸಾಧಿಸಲು ಸಹಾಯಕವಾದದ್ದು ಗ್ಯಾರೆಂಟೀ ಯೋಜನೆಗಳು ಎಂದರೆ ತಪ್ಪಾಗಲಾರದು. ಚುನಾವಣೆಯ ಐದು ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಜಾರಿಗೆ ತಂದಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಸಿಕ್ಕಿದ್ದೇ ತಡ ಪ್ರತಿಬ್ಬರು ಕೆ.ಎಸ್.ಆರ್.ಟಿ.ಸಿ ಗಾಗಿ ಕಾಡು ಕುಳಿತಿದ್ದಾರೆ. ಇದರಿಂದ ಖಾಸಗಿ ಬಸ್ ಚಾಲಕರು ಹಾಗೂ ಸಿಬ್ಬಂದಿ, ಆಟೋರಿಕ್ಷಾ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಆಟೋ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜುಲೈ 27 ರಂದು ಬಂದ್‌ಗೆ ಕರೆ ನೀಡಿದ್ದಾರೆ. ಜುಲೈ 26ರ ಮಧ್ಯರಾತ್ರಿಯಿಂದ, 27 ರ ಮಧ್ಯರಾತ್ರಿಯ ವರೆಗೆ ಯಾವುದೇ ಆಟೋ, ಓಲಾ, ಊಬರ್, ಕ್ಯಾಬ್ ಮತ್ತು ಖಾಸಗಿ ಬಸ್‌ಗಳು ಕಾರ್ಯನಿರ್ವಹಿಸುವುದಿಲ್ಲ.



