ಕರಾವಳಿ

ಮಂಗಳೂರು: ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು..!!

ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಗಮನಾರ್ಹ ಬದಲಾವಣೆಯಾಗಿದೆ. 5 ತಿಂಗಳು ರೈಲುಗಳ ಸಂಚಾರ ಸಂಪೂರ್ಣ ರದ್ದಾಗಲಿದೆ. ಈ ಬಗ್ಗೆ ವರದಿ ಇಲ್ಲಿದೆ.

ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮಾರ್ಗದಲ್ಲಿ ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ, ಜೂನ್ 1 ರಿಂದ ನವೆಂಬರ್ 1, 2025ರವರೆಗೆ ಬೆಂಗಳೂರು-ಮಂಗಳೂರು ಮತ್ತು ಬೆಂಗಳೂರು-ಕಾರವಾರ ನಡುವಿನ ಆರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಕೋರಿದೆ. ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ರದ್ದಾಗುವ ರೈಲುಗಳು
ಮೇ 31 ರಿಂದ ನವೆಂಬರ್ 1 ರವರೆಗೆ ಶನಿವಾರಗಳಂದು ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16539) ರದ್ದು.
ಜೂನ್ 1 ರಿಂದ ನವೆಂಬರ್ 2 ರವರೆಗೆ ಭಾನುವಾರಗಳಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16540) ರದ್ದು.
ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16575) ರದ್ದು.
ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16576) ರದ್ದು.
ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16515) ರದ್ದು.
ಜೂನ್ 3 ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16516) ರೈಲು ರದ್ದು.

ಗೊಮ್ಮಟೇಶ್ವರ ಎಕ್ಸ್‍ಪ್ರೆಸ್, ಕಾರವಾರ ಎಕ್ಸ್‍ಪ್ರೆಸ್, ಮಂಗಳೂರು ಸೆಂಟ್ರಲ್ ವಾರದ ವಿಶೇಷ ಎಕ್ಸ್‍ಪ್ರೆಸ್ ಮುಂದಿನ 5ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ. ಈ ಮೂಲಕ ಪ್ರಯಾಣಿಕರು ಬದಲಿ ಮಾರ್ಗ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಯುಎಇ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್ ತಯಾರಕರಾದ ಫ್ಲೋರ್ ಮಾಸ್ಟರ್ಸ್, ಆಂಧ್ರಪ್ರದೇಶದಲ್ಲಿ ವಿಶ್ವ ದರ್ಜೆಯ ಸಂಯೋಜಿತ ಫ್ಲಾಟ್‌ಬ್ರೆಡ್ ಉತ್ಪಾದನಾ ಪರಿಸರ…

11 hours ago

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಪುಟ್ಟ ಮಕ್ಕಳು ಸಹಿತ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ…

16 hours ago

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ಅಮೆರಿಕ ಮತ್ತು ಇರಾನ್ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿನ ಮಿಲಿಟರಿ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ…

16 hours ago

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…

2 days ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…

3 days ago

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…

3 days ago