ಜನ ಮನದ ನಾಡಿ ಮಿಡಿತ

Advertisement

ಮಂಗಳೂರು : ಕೂಳೂರು ಸೇತುವೆ ; ನೀರಿನ ಹರಿವು ಹೆಚ್ಚಾದರೆ ಕಾಮಗಾರಿಗಾಗಿ ಹಾಕಲಾದ ಮಣ್ಣು ತೆರವು ಮಾಡಬೇಕಾಗಿ ಬರಬಹುದು

ಒಂದೆಡೆ ಮುಂಗಾರು ನಿರೀಕ್ಷೆಗೂ ಮೊದಲೇ ಈ ಮಾಸಾಂತ್ಯಕ್ಕೆ ಆಗಮಿಸುವ ಸಾಧ್ಯತೆ ಗೋಚರಿಸಿದೆ, ಹಾಗಾಗಿ ರಾಷ್ಟ್ರೀಯ ಹೆದ್ದಾರಿ 660 ಕೂಳೂರಿನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕೆಲಸ ಮತ್ತೆ ಮುಂದಕ್ಕೆ ಹೋಗುವ ಭೀತಿ ಎದುರಾಗಿದೆ.

ಕಾರಣ ಫಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಗೆ ಗರ್ಡರ್ ಕೂರಿಸುವುದಕ್ಕಾಗಿ ಮಣ್ಣು ಹಾಕಲಾಗಿದೆ. ಒಂದು ವೇಳೆ ಮಳೆ ತೀವ್ರಗೊಂಡು ನದಿಯಲ್ಲಿ ನೀರು ಹೆಚ್ಚು ಹರಿದು ಬಂದರೆ ಈ ಮಣ್ಣನ್ನು ತೆರವುಗೊಳಿಸಬೇಕಾಗಿ ಬರಬಹುದು. ಸದ್ಯ ಹಳೆ ಸೇತುವೆಯ ಆರು ಸ್ಪಾನ್‌ಗಳ ಪೈಕಿ ನಾಲ್ಕರ ಭಾಗಕ್ಕೆ ಮಣ್ಣು ತುಂಬಲಾಗಿದೆ. ಉಳಿದ ಎರಡರ ಭಾಗದಲ್ಲಷ್ಟೇ ನೀರು ಹರಿದು ಹೋಗುತ್ತಿದೆ. ಬೇಸಿಗೆಯಾದ್ದರಿಂದ ಪ್ರಸ್ತುತ ಕೆಲಸ ಚುರುಕಾಗಿ ನಡೆಯುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ನದಿಗುಡ್ಡ ಮಣ್ಣು ಹಾಕುವುದು, ಮಳೆಗಾಲದಲ್ಲಿ ತೆರವು ಮಾಡುವುದು ನಡೆಯುತ್ತಲೇ ಇದೆ. ಈ ಬಾರಿಯಾದರೂ ಗರ್ಡರ್ ಕೂರಿಸುವ ಕೆಲಸ ನಡೆಸಬೇಕು ಎಂದು ಹಿಂದಿನ ಬಾರಿಯ ದಿಶಾ ಸಭೆಯಲ್ಲಿ ಸಂಸದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಮಳೆಗಾಲ ಬಂದಾಗ ಮಣ್ಣು ಬಿಡಿಸಿಕೊಡದೆ ಹೋದರೆ ಕೂಳೂರು, ಅತ್ರಬೈಲು, ತೋಕೂರು ಅಸುಪಾಸಿನಲ್ಲಿ ನೆರೆಯಾಗುವ ಸಂಭವದ ಬಗ್ಗೆ ಆ ಭಾಗದ ನಿವಾಸಿಗಳಿಂದಲೂ ಕಳವಳ ವ್ಯಕ್ತವಾಗುತ್ತಿದೆ. 1952ರಲ್ಲಿ ನಿರ್ಮಾಣಗೊಂಡಿದ್ದ ಕೂಳೂರು ಹಳಿ ಕಮಾನು ಸೇತುವೆ ದುರ್ಬಲವಾಗಿದೆ ಎಂದು 2019ರಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರದಿ ನೀಡಿತ್ತು. ಆ ಬಳಿಕ 56 ಕೋ.ರೂ. ವೆಚ್ಚದಲ್ಲಿ ಹೊಸ 776 ಮೀ.ಉದ್ದದ 6 ಲೇನ್ ಸೇತುವೆಯ ರೂಪುರೇಷೆ ಹಾಕಲಾಗಿತ್ತು. 2021ರಲ್ಲಿ ಕೆಲಸ ಆರಂಭಗೊAಡಿದ್ದು, ಗುತ್ತಿಗೆದಾರರ ಹಣಕಾಸು ಸಮಸ್ಯೆಯಿಂದ ಕೆಲಸ ಸ್ಥಗಿತಗೊಂಡಿತು. 2023ರಲ್ಲಿ ಮತ್ತೆ ಕಾಮಗಾರಿ ಆರಂಭಗೊAಡಿದ್ದು ಕೆಲಸ ನಿಧಾನವಾಗಿ ನಡೆಯುತ್ತಿದೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!