ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುವ ಏಜೆನ್ಸಿ ವಿರುದ್ದ ಕಠಿಣವಾದ ಕ್ರಮವನ್ನು ಪೊಲೀಸ್ ಆಯುಕ್ತರು ಕೈಗೊಳ್ಳಬೇಕೆಂದು ಸಂತ್ರಸ್ತರ ಪರ ಹೋರಾಟಗಾರ ಲಾರೆನ್ಸ್ ಡಿ’ಸೋಜ ಹೇಳಿದ್ದಾರೆ.

ಇವರು ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಕೇರಳ, ಆಂಧ್ರ ಮುಂತಾದ ಕಡೆಗಳಲ್ಲಿ ಇವರ ಏಜೆನ್ಸಿಗಳು ಕಾರ್ಯಾಚರಣೆ ಮಾಡ್ತಾ ಇದೆ. 300 ಕ್ಕೂ ಅಧಿಕ ಸಂಖ್ಯೆಯ ಜನರಿಗೆ ಕೆಲಸ ಕೊಡುವುದಾಗಿ ಮೊಸ ಮಾಡಿ ಸಂತ್ರಸ್ತರಿAದ 9 ಕೋಟಿಗೂ ಅಧಿಕ ಮೊತ್ತದ ಹಣವನ್ನು ಆನ್ಲೈನ್ ಮೂಲಕ, ಏಜೆನ್ಸಿಯ ಬ್ಯಾಂಕ್ ಖಾತೆ ಮತ್ತು ಕ್ಯೂ ಆರ್ ಕೋಡ್ ಮೂಲಕ ಹಣ ಜಮೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಗ್ರೋ ಏಜೆನ್ಸಿ ಅಕ್ರಮವಾಗಿ ಕಾರ್ಯಾಚರಣೆ ನಡೆಸಿದೆ ಎಂದು ಕೆಲವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಲಿಖಿತ್, ಸಾಧಿಕ್, ವರ್ಷಿತ್, ವಿಲ್ಟನ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ರು.



