ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಮಳೆ ಸುರಿದಿದೆ. ಸುಮಾರು ಮುಕ್ಕಾಲು ಗಂಟೆ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿದೆ.

ಸೋಮವಾರ ರಾತ್ರಿ ಮಂಗಳೂರು ನಗರದ ಸುತ್ತ ಮುತ್ತ ಮಳೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಜಿಲ್ಲೆಯ ವಿವಿಧೆಡೆ ವ್ಯಾಪಕವಾಗಿ ಮಳೆ ಬಿದ್ದಿದೆ. ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಅಡೆತಡೆಗಳುಂಟಾಗಿವೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಘಟನೆಗಳೂ ವರದಿಯಾಗಿವೆ. ನೀರಿನ ಕೊರತೆಯಿಂದ ಚಿಂತಿತರಾಗಿದ್ದ ಕೃಷಿಕರಿಗೆ ತೋಟಗಳಿಗೆ ನೀರು ಹಾಕುವ ಕೆಲಸವನ್ನು ಮಳೆ ಕಡಿಮೆ ಮಾಡಿದೆ.



