ಕಾಪು ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಯಾರು ಬೊಬ್ಬರ್ಯ ಗುಜ್ಜಿ ಪ.ಜಾತಿ ಕಾಲನಿ ಭವಾನಿ ಮುಖಾರಿ ಮನೆಯಿಂದ ಪ್ರತಿಭಾ ಮುಖಾರಿ ಮನೆತನ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಭೂಮಿಪೂಜೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ನೆರವೇರಿಸಿದ್ರು. 
ಈ ಸಂದರ್ಭದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಶೆಟ್ಟಿ, ಲತಾ ಆಚಾರ್ಯ, ಮಾಜಿ ಸದಸ್ಯರಾದ ಶಾಂತಾ, ಸ್ಥಳೀಯರಾದ ಅಣ್ಣಯ್ಯ ನಾಯ್ಕ್, ಶೀನಾ ನಾಯ್ಕ್ ಹಾಗೂ ಪ್ರಮುಖರು ಉಪಸ್ಥಿತರಿದ್ರು.



