ಅಂಬ್ಯುಲೆನ್ಸ್ ಹಾಗೂ ಕಾರು ಮುಖಾಮುಖಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಚಿಕಿತ್ಸೆಗೆ ತೆರಳುತ್ತಿದ್ದ ಓರ್ವ ಮಹಿಳೆ ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಉಪ್ಪಳ ಗೇಟ್ ಸಮೀಪ ಮಂಗಳವಾರ ಸಂಜೆ ಸಂಭವಿಸಿದೆ. ಮೃತಪಟ್ಟ ಮಹಿಳೆಯನ್ನು ಶಾಹೀನಾ (48) ಎಂದು ಗುರುತಿಸಲಾಗಿದೆ.

ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಕಣ್ಣೂರಿನ ಆಸ್ಪತ್ರೆಯಿಂದ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದೆ. ಗಂಭೀರ ಗಾಯಗೊಂಡ ಶಾಹೀನಾ ಅವರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದ್ರು. ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಇದು ಮಾತ್ರವಲ್ಲದೆ ನಿನ್ನೆ ಒಂದೇ ದಿನ 3 ಸರಣಿ ಅಪಘಾತ ನಡೆದು ಚಿಕ್ಕ ಪುಟ್ಟ ಗಾಯವಾಗಿದೆ.



