ಜನ ಮನದ ನಾಡಿ ಮಿಡಿತ

Advertisement

ಬೆಂಗಳೂರು: ಸಾಮೂಹಿಕ ಅತ್ಯಾಚಾರ ಆರೋಪ; ಬಿಜೆಪಿ ಶಾಸಕ ಮುನಿರತ್ನ ಮೇಲೆ ಮತ್ತೊಂದು ಎಫ್ ಐಆರ್

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೇಸ್‌ ದಾಖಲಾಗಿದೆ. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ಶಾಸಕ ಮುನಿರತ್ನ ಮತ್ತು ಬೆಂಬಲಿಗರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಾಸಕ ಮುನಿರತ್ನ, ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್ ಹಾಗೂ ಒಬ್ಬ ಅಪರಿಚಿತನ ವಿರುದ್ಧ ಕೇಸ್​ ದಾಖಲಾಗಿದೆ.

2013ರಲ್ಲಿ ಜೆಪಿ ಪಾರ್ಕ್‌ನ ಶಾಸಕರ ಕಚೇರಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಇಂಜೆಕ್ಷನ್ ತರಿಸಿ ಇಂಜೆಕ್ಟ್ ಮಾಡಿಸಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಅತ್ಯಾಚಾರಕ್ಕೂ ಮುನ್ನ ನೀಡಿದ ಇಂಜೆಕ್ಷನ್​ನಿಂದ ಈಗ ನನಗೆ ಇಡಿಆರ್ ಎಂಬ ಕಾಯಿಲೆ ಬಂದಿದೆ. ಇದರಿಂದ ಮನನೊಂದು ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತೆ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376D, 270, 323, 354, 504, 506, 509, 34 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ‘ಈ ಹಿಂದೆ ಬಿಜೆಪಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಗಂಡ ಬಿಟ್ಟು ಹೋದ ಬಳಿಕ 2ನೇ ಮದುವೆ ಆಗಿ ಜೀವನ ನಡೆಸುತ್ತಿದ್ದೆ. ವೇಶ್ಯಾವಾಟಿಕೆ ಆರೋಪ ಹೊರಿಸಿ ನನ್ನನ್ನು ಜೈಲಿಗೆ ಕಳಿಸಿದ್ದರು. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದೆ. ಕೆಲವರು ನನ್ನ ಕೇಸ್​ ಇತ್ಯರ್ಥ ಮಾಡಿಕೊಡುವುದಾಗಿ ಆಮಿಷವೊಡ್ಡಿ ನನ್ನನ್ನು ಕಚೇರಿಗೆ ಕರೆಸಿ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!