ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿ ಕಾರಿನ ಚಾಲಕ ಸೇರಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಪು ಕಡೆಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಕಾರ್ನಾಡ್ ಬೈಪಾಸ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಎರೆಟಿಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇನ್ನೋವಾ ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊAಡಿದ್ದು ಎರೆಟಿಗ ಕಾರಿಗೆ ಹಾನಿಯಾಗಿದೆ. ಅಪಘಾತದಿಂದ ಇನ್ನೋವಾ ಕಾರಿನಲ್ಲಿದ್ದ ಪ್ರಯಾಣಿಕರಾದ ಕಾಪು ಮಜೂರು ನಿವಾಸಿಗಳಾದ ಸುಳ್ಯ ನಿವಾಸಿ ಜೈನಾಬಿ ಮತ್ತು ಮೈಮುನಾ ಹಾಗೂ ಎರೆಟಿಗ ಕಾರು ಚಾಲಕ ಸುಳ್ಯ ನಿವಾಸಿ ಪ್ರಶಾಂತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ತೀವ್ರತೆಗೆ ಎರಟಿಗ ಕಾರು ಮಂಗಳೂರಿನತ್ತ ಮುಖ ಮಾಡಿ ನಿಂತಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 66 ಕಾರ್ನಾಡ್ ಬೈಪಾಸ್ ಬಳಿ ನಿರಂತರ ಅಪಘಾತ ನಡೆಯುತ್ತಿದ್ದು ವಾಹನ ಚಾಲಕರು ಎಚ್ಚರಿಕೆಯಿಂದ ಚಲಿಸಬೇಕಾಗಿದೆ.



