ಹನಗೋಡು ಹೋಬಳಿಯ ಸುತ್ತ ಮುತ್ತ ಕುಂಡೆ ಹಬ್ಬ ಆಚರಣೆ ಗಿರಿಜನ ಹಾಡಿ ಜನಗಳು ವಿಶೇಷ ಉಡುಗೆ ತೊಡುಗೆ ತೊಟ್ಟು, ಬೀದಿಗಳಲ್ಲಿ ವಿವಿಧ ಭಂಗಿಗಳಲ್ಲಿ ಕುಣಿತ ಹಾಕುತ ಕುಂಡೆ ಹಬ್ಬವನ್ನು ಆಚರಣೆ ಮಾಡಲಾಯಿತು.

ಇನ್ನು ಈ ಆಚರಣೆಯಲ್ಲಿ ಗಿರಿಜನರು ಅವರದೆ ರೀತಿಯಲ್ಲಿ ಡೋಲ್ ವಾದ್ಯಗಳನ್ನು ಸಿದ್ದಪಡಿಸಿ ನುಡಿಸಿ ಕುಣಿಯುವಾಗ ಅವಾಚ್ಯ ಶಬ್ದಗಳಿಂದ ಬೈಯುವುದು ಈ ಹಬ್ಬದ ವೈಶಿಷ್ಟ್ಯವಾಗಿದೆ. ಮುಖ್ಯ ರಸ್ತೆಯುಲ್ಲಿ ಕುಣಿತ ಹಾಕುತ್ತ ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಹಣ ಸಂಗ್ರಹಿಸಿ, ಕೊನೆಯದಾಗಿ ಅರಾಧ್ಯ ದೇವರಾದ ಭದ್ರಕಾಳಿ ದೇವಿಯ ಬಳಿಗೆ ತೆರಳಿ, ವಿಶೇಷ ಪೂಜೆ ಮಾಡಿ, ಅನ್ನದಾನ ಮಾಡುವ ಮೂಲಕ ಹಬ್ಬವನ್ನು ಪೂರ್ಣಗೊಳಿಸಲಾಗುತ್ತದೆ



