ಕೂಳೂರು ಬಸ್ಟ್ಯಾಂಡ್‌ನಲ್ಲಿ ಕಾವೂರು ಕಡೆಗೆ ಸಂಚರಿಸುವ ಬಸ್ಸುಗಳು ನಿಲ್ಲುವಲ್ಲಿ ಜನರಿಗೆ ಬಸ್ಸಿಗೆ ಹತ್ತಲು ಕಷ್ಟ ಆಗುತ್ತಿದೆ.

ಇಲ್ಲಿ ಮಳೆ ಬಂದರೆ ಮೊಣಕಾಲುವರೆಗೆ ನೀರು ನಿಲ್ಲುತ್ತದೆ. ಸ್ಥಳೀಯ ಕಾರ್ಪೊರೇಟರ್ ಅವರ ಹತ್ತಿರ ಹಲವಾರು ಬಾರಿ ಈ ಬಗ್ಗೆ ದೂರಲಾಗಿದೆ, ಆದರೂ ಇದರ ಬಗ್ಗೆ ಗಮನ ಕೊಡುವುದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸಮಸ್ಯೆ ಬಗೆಹರಿಸಲಾಗದಿದ್ದರೆ ಬಸ್ ಸ್ಟ್ಯಾಂಡ್‌ನಿAದ ಬಸ್ಸು ಹತ್ತಲು ದೋಣಿಯ ವ್ಯವಸ್ಥೆ ಮಾಡಿಕೊಡಿ ಎಂದೊಬ್ಬರು ಹಾಕಿರುವ ಸ್ಟೇಟಸ್ ಗಮನ ಸೆಳೆಯುತ್ತಿದೆ.



