ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಮೊಗವೀರ ಸಮಾಜದ ಕಡೆಗಣನೆ ಮಾಡಲಾಗಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘ ಖಂಡಿಸಿದೆ.

ಕಾಪು ಶ್ರೀ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದಿನಿ0ದಲೂ ಮೊಗವೀರ ಸಮಾಜಕ್ಕೆ 2 ಪ್ರಾತಿನಿಧ್ಯ ನೀಡಲಾಗುತಿತ್ತು. ಅದರಂತೆ ಈಗಿನ ಸಮಿತಿಯಲ್ಲಿ ಶ್ರೀಧರ್ ಕಾಂಚನ್‌ರವರಿಗೆ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ಶ್ರೀಧರ್ ಕಾಂಚನ್‌ರವರು ಅಕಾಲಿಕವಾಗಿ ದೈವಾಧೀನರಾಗಿದ್ದು, ಅವರ ಸ್ಥಾನಕ್ಕೆ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಬೇರೆ ಸಮಾಜದವರನ್ನು ಆಯ್ಕೆ ಮಾಡಿ, ಕಾಪು ಕ್ಷೇತ್ರದಲ್ಲಿ ಬಹು ಸಂಖ್ಯೆಯಲ್ಲಿರುವ ಮೊಗವೀರ ಸಮಾಜಕ್ಕೆ ಅವಮಾನ ಮಾಡಲಾಗಿದೆ ಎಂದು ಸಂಘ ದೂರಿದೆ.



