ಸ್ಥಳೀಯಾಡಳಿತ ತಾನು ಮಾಡಲ್ಲ…, ಖಾಸಗಿಯವರು ಅಭಿವೃದ್ಧಿ ಮಾಡಲು ಮುಂದೆ ಬಂದ್ರೂ ಬಿಡ್ತಾಯಿಲ್ಲ. ಇದು ಉಡುಪಿಯ ತೆಂಕನಿಡಿಯೂರು ಗ್ರಾಮದ ಪರಿಸ್ಥಿತಿ. ಒಂದು ಕೋಟಿ ಫಂಡ್ ಕೊಡುತ್ತೇವೆ ಅಂದ್ರೂ ಕೆರೆ ಉದ್ಯಾನ ಆಟದ ಮೈದಾನ ಅಭಿವೃದ್ಧಿಗೆ ಪಂಚಾಯತ್, ಜಿಲ್ಲಾಡಳಿತ ಸಹಕರಿಸ್ತಿಲ್ಲ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಉಡುಪಿ ನಗರಸಭೆ ಮತ್ತು ಅದಕ್ಕೆ ಹೊಂದಿಕೊ0ಡ ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ಎಕರೆ ವ್ಯಾಪ್ತಿಯಲ್ಲಿ ಕೆರೆಯಿದೆ. ವರ್ಷಗಳಿಂದ ಕೆರೆಯಲ್ಲಿ ಹೋಳು ತುಂಬಿಕೊ0ಡಿದೆ. ನಗರ ಸಭೆ ಅಥವಾ ಪಂಚಾಯತ್ ಹೂಳೆತ್ತುವ ಕೆಲಸ ಮಾಡಿಲ್ಲ ಸುತ್ತ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ವರ್ಷದ ಹಿಂದೆ ಸ್ಥಳೀಯ ಸ್ವರ್ಣೋದ್ಯಮ ಸಂಸ್ಥೆ ತನ್ನ ಸಿ ಎಸ್ ಆರ್ ಹಣದಲ್ಲಿ ಕೆರೆ ಅಭಿವೃದ್ಧಿ ಸೂಕ್ತ ವಾಕಿಂಗ್ ಟ್ರ‍್ಯಾಕ್ ಮಕ್ಕಳ ಆಟದ ಮೈದಾನ ಮತ್ತು ಉದ್ಯಾನವನ ನಿರ್ಮಿಸಲು ಮುಂದಾಗಿದೆ. ನಗರಸಭೆ ಮತ್ತು ಪಂಚಾಯತ್ ನ ನಿರಾಕ್ಷೇಪಣಾ ಪತ್ರ ಪಡೆದಿತ್ತು.

ಆದರೆ ನಿರಾಪೇಕ್ಷಾಣಾ ಪತ್ರ ಪಡೆದರೂ ಈಗ ಗ್ರಾಮ ಪಂಚಾಯತ್ ಇದೇ ಅಭಿವೃದ್ದಿ ಕೆಲಸಕ್ಕೆ ಆಕ್ಷೇಪ ನೀಡಿದೆ. ದೇವರು ಕೊಟ್ಟರು ಪೂಜಾರಿ ಬಿಡಲ್ಲ ಎನ್ನುವ ಪರಿಸ್ಥಿತಿ ಇಲ್ಲಿ ಉದ್ಭವವಾಗಿದೆ.ಇನ್ನೂ ಗ್ರಾಮಸ್ಥರು ಹೇಳುವ ಪ್ರಕಾರ ಈ ಅಭಿವೃದ್ಧಿ ಕೆಲಸಕ್ಕೆ ಸ್ಥಳೀಯ ವ್ಯಕ್ತಿಯೊಬ್ಬರಿಂದ ಅಡ್ಡಗಾಲಿದ್ದು, ಈಗ ಪಂಚಾಯತ್ ಕಾಮಗಾರಿಗೆ ತಡೆ ತಂದಿದೆ. ಕೆರೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಸುತ್ತಮುತ್ತ ಐವತ್ತಕ್ಕಿಂತ ಹೆಚ್ಚು ಮನೆಗಳಿದ್ದು ಕುಸಿಯುವ ಭೀತಿಯಲ್ಲಿದೆ. ಈ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ತುಂಬಿಕೊ0ಡರೆ ಸುತ್ತಮುತ್ತಲ ಭೂಮಿಯೆಲ್ಲಾ ತೇವಗೊಳ್ಳುತ್ತದೆ. ಕೆರೆಯ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲ.

ಕೆರೆ ತುಂಬಿ ಹರಿಯಲು ಪೈಪ್ ಲೈನ್ ವ್ಯವಸ್ಥೆಗಳನ್ನು ಮಾಡುವ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದೆ. ಇದರಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಕಾಂಗ್ರೆಸ್ -ಬಿಜೆಪಿ ರಾಜಕೀಯ ಜಟಾಪಟಿಯಿಂದ ಊರಿನ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಸ್ಥಳಕ್ಕೆ ಶಾಸಕರು, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಡಿ.ಸಿ ಭೇಟಿ ಕೊಟ್ಟಿದ್ದಾರೆ. ಮಳೆಯಿಂದಾಗಿ ಇಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಪಂಚಾಯತ್ ಮತ್ತು ಸರ್ಕಾರಿ ಅಧಿಕಾರಿಗಳೇ ಕಾರಣವಾಗುತ್ತಾರೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.



