ಮುಂಬರುವ ಇಂಗ್ಲೆಂಡ್ ಪ್ರವಾಸದ ಭಾರತ 19ರ ವಯೋಮನ ಕ್ರಿಕೆಟ್ ತಂಡವನ್ನು ಮೇ 22 ರಂದು ಗುರುವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದ 14ರ ವಯಸ್ಸಿನ ಪೋರ ವೈಭವ್ ಸೂರ್ಯವಂಶಿ ಭಾರತ ಅಂಡರ-19 ತಂಡದಲ್ಲಿ ಚೊಚ್ಚಲ ಅವಕಾಶವನ್ನು ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆರಂಭಿಕ ಆಯುಷ್ ಮ್ಹಾತ್ರೆ ಅವರು ಭಾರತ ಕಿರಿಯರ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿದೆ.

ಜೂನ್ 24 ರಿಂದ ಜುಲೈ 23ರವರೆಗೂ ಭಾರತ ತಂಡ ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಮೊದಲಿಗೆ ಅಭ್ಯಾಸವನ್ನು ಪಂದ್ಯವನ್ನು ಆಡಲಿದೆ. ನಂತರ ಐದು ಪಂದ್ಯಗಳ ಯುವ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ನಂತರ ಎರಡು ದಿನಗಳ ಹಲವು ಪಂದ್ಯಗಳನ್ನು ಉಭಯ ತಂಡಗಳು ಕಾದಾಟ ನಡೆಸಲಿವೆ. ಇಂಗ್ಲೆಂಡ್ನಲ್ಲಿ ವೇಗದ ಬೌಲಿಂಗ್ ಕಂಡೀಷನ್ಸ್ ಇರುವ ಕಾರಣ ಭಾರತ ಅಂಡರ್-19 ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.



