ಕೇರಳ ಸಮಾಜಮ್ ಉಡುಪಿ ಇದರ ಉದ್ಘಾಟನಾ ಸಮಾರಂಭವು ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.

ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು, ಇಡೀ ಜಗತ್ತಿಗೆ ಕೇರಳ ಸಮಾಜದ ಕೊಡುಗೆ ಅಪಾರ. ಯಾವುದೇ ದೇಶ, ರಾಜ್ಯಕ್ಕೆ ಹೋದರೂ ಕೇರಳಿಗರು ಸಿಗುತ್ತಾರೆ. ವೈದ್ಯಕೀಯ, ಶಿಕ್ಷಣ, ಬ್ಯಾಂಕಿ0ಗ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಾ ವಿಶ್ವದ ಮೆಚ್ಚುಗೆಗೆ ಕೇರಳಿಗರು ಪಾತ್ರರಾಗಿದ್ದಾರೆ ಎಂದ್ರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಹಾಗೂ ಕೇರಳಿಗರ ಮಧ್ಯೆ ಭಾಷೆ ವಿಚಾರದಲ್ಲಿ ವ್ಯತ್ಯಾಸ ಇರಬಹುದು. ಆದರೆ ಆಚಾರ ವಿಚಾರದಲ್ಲಿ ಭಾವನಾತ್ಮಕವಾಗಿ ಬಹಳಷ್ಟು ಒಟ್ಟಾಗಿದ್ದೇವೆ. ಕೇರಳದಲ್ಲಿ ಅನುಸರಿಸಿಕೊಂಡು ಬರುತ್ತಿರುವ ಧಾರ್ಮಿಕ ಪದ್ಧತಿಯನ್ನೇ ಇಲ್ಲಿ ಕೂಡ ಅನುಸರಿಸಲಾಗುತ್ತಿದೆ. ಒಂದು ಸಮಾಜದ ಅಭಿವೃದ್ಧಿ, ಏಳಿಗೆ ಆಗಬೇಕಾದರೆ ಇಂತಹ ಸಂಘ ಸಂಸ್ಥೆಗಳು ಬಹಳ ಮುಖ್ಯ. ಈ ನೂತನ ಸಂಸ್ಥೆ ಬಹಳಷ್ಟು ಎತ್ತರಕ್ಕೆ ಬೆಳೆದು, ಸಮಾಜದ ಅಭಿವೃದ್ಧಿ ಶ್ರಮಿಸಲಿ ಎಂದು ಹಾರೈಸಿದ್ದಾರೆ. ಕೇರಳ ಸಮಾಜಮ್ ಉಡುಪಿ ಇದರ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ರು.



