ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನ ಬದಿಗೆ ಸರಿಸಲು ಹೇಳಿದ್ದಕ್ಕೆ ಕುಪಿತಗೊಂಡ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ತೊಕ್ಕೊಟ್ಟು ಜಂಕ್ಷನ್ ನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲಕರಾದ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನ ಸ್ವಲ್ಪ ಬದಿಗೆ ಸರಿಸುವಂತೆ ಚಾಲಕ ಬಶೀರ್ ನಲ್ಲಿ ಹೇಳಿದ್ದಾರೆ. ಇಷ್ಟಕ್ಕೇ ಕುಪಿತಗೊಂಡ ಚಾಲಕ ಬಶೀರ್ ತನ್ನ ಸಹಚರ ರಿಕ್ಷಾ ಚಾಲಕನಾದ ಇಶಾನ್ ನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಅಶ್ವಿನ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಬಶೀರ್ ಮತ್ತು ಇಶಾನ್ ಜೊತೆ ಮತ್ತೆ ಕೆಲವು ರಿಕ್ಷಾ ಚಾಲಕರು ದಾಂಧಲೆಗೆ ಕುಮ್ಮಕ್ಕು ನೀಡಿದ್ದಾರೆ. ಬೇಕರಿಯೊಳಗಿದ್ದ ಅಶ್ವಿನ್ ಅವರ ತಾಯಿ ಮತ್ತು ಸಿಬ್ಬಂದಿ ಯುವತಿ ರಿಕ್ಷಾ ಚಾಲಕರನ್ನ ತಡೆದಿದ್ದು ಅವರನ್ನೂ ತಳ್ಳಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಶಿವಸಾಗರ್ ಹೊಟೇಲಿನ ಮಾಲಕ ಸುಚಿವೃತ ಶೆಟ್ಟಿ ಅವರು ಮಧ್ಯ ಪ್ರವೇಶಿಸಿ ಬೇಕರಿ ಮಾಲೀಕನಿಗೆ ಹಲ್ಲೆಗೆ ಮುಂದಾಗಿದ್ದ ಪುಂಡ ರಿಕ್ಷಾ ಚಾಲಕರನ್ನ ಅಂಗಡಿಯಿAದ ಹೊರ ತಳ್ಳಿದ್ದಾರೆ. ಘಟನೆಯ ದೃಶ್ಯವು ಬೇಕರಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೇಕರಿ ಮಾಲಕ ಅಶ್ವಿನ್ ಅವರು ತನ್ನ ಮತ್ತು ತಾಯಿ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ನೀಡಿರುವ ರಿಕ್ಷಾ ಚಾಲಕರಾದ ಬಶೀರ್ ಮತ್ತು ಇಷಾನ್ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಬಜ್ಜೆಯಲ್ಲಿ ನಡೆದಿರುವ ಸುಹಾಸ್ ಶೆಟ್ಟಿ ಕೊಲೆಯ ಕಿಚ್ಚು ಜೀವಂತ ಇರುವಾಗಲೇ ಗೂಂಡಾ ರಿಕ್ಷಾ ಚಾಲಕರು ಬೇಕರಿಗೆ ನುಗ್ಗಿ ಧಾಂದಲೆ ನಡೆಸಿರುವುದು ಪೊಲೀಸ್ ಇಲಾಖೆಯನ್ನೂ ಅಲರ್ಟ್ ಮಾಡಿಸಿದೆ. ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…