ಮುಂಗಾರು ಅಡಿ ಇಟ್ಟಿತೋ ಎಂಬ0ತೆ ಕರಾವಳಿಯಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಮರಗಳು ಉರುಳಿವೆ.

ಕೊಂಬೆ ಮುರಿದು ಬಿದ್ದು ವಿದ್ಯುತ್ ಕಡಿತ ಉಂಟಾದ ಬಗ್ಗೆ ವರದಿಗಳು ಬಂದಿವೆ. ಅರಬ್ಬೀ ಸಮುದ್ರದಲ್ಲಾದ ವಾಯುಭಾರ ಕುಸಿತದಿಂದಾಗಿ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ರೈತರಿಗೆ ತೋಟಗಳಿಗೆ ನೀರು ಹಾಕುವ ಕೆಲಸಕ್ಕೆ ಮಳೆ ವಿನಾಯತಿ ನೀಡಿದೆ. ಪತ್ತನಾಜೆಯಿಂದ ಮಳೆಗಾಲ ಎಂಬುದು ತುಳುವರ ನಂಬುಗೆ ಮತ್ತು ಲೆಕ್ಕಾಚಾರ. ಮುಂಗಾರು ಪೂರ್ವ ಮಳೆ ಈ ವರ್ಷ ಧಾರಾಕಾರ ಸುರಿಯುತ್ತಿರುವುದರಿಂದ ನೀರಿನ ವಾರ್ಷಿಕ ಸಮಸ್ಯೆ ಜಿಲ್ಲೆಯನ್ನು ಹಿಂದಿನ ವರ್ಷಗಳಷ್ಟು ಗಂಭೀರವಾಗಿ ಕಾಡಿಲ್ಲ.



