2024ರ ಅ.30ರಂದು ನೋಂದಾವಣೆಗೊ0ಡು ಅಸ್ತಿತ್ವಕ್ಕೆ ಬಂದಿರುವ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾ ಅಧಿವೇಶನವು ಜೂ.1ರಂದು ಬೆಳಿಗ್ಗೆ ಗಂಟೆ 10 ರಿಂದ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಲಾಗುತ್ತದೆ ಎಂದು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಸಂಘ ನೋಂದಾವಣೆಗೊ0ಡು ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಹೊತ್ತಿಗೆ ಸರ್ವ ಸದಸ್ಯರ ಮಹಾಅಧಿವೇಶನ ನಡೆಸಬೇಕೆಂದು ತೀರ್ಮಾನಿಸಿದಂತೆ ಈ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಸುಳ್ಯದಲ್ಲಿ ದೊಡ್ಡ ಸಭೆ ನಡೆಸುವುದೆಂದು ತೀರ್ಮಾನಿಸಿದ್ದೆವು. ಕಾರಣಾಂತರಗಳಿAದ ಅದು ಮುಂದೂಡಲ್ಪಟ್ಟಿತ್ತು. ಈಗ ಪುತ್ತೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಲಿದ್ದೇವೆ. ಪ್ರಥಮ ಮಹಾಅಧಿವೇಶನವನ್ನು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ ಕೆ.ವಿ ಅವರು ಉದ್ಘಾಟಿಸಲಿದ್ದಾರೆ. ಎಲ್ಲಾ ತಾಲೂಕು ಸಂಘದ ಅಧ್ಯಕ್ಷರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಸಭೆಯಲ್ಲಿ ಸಂಘದ ಗೌರವ ಸಲಹೆಗಾರರು, ನಿರ್ದೇಶಕರು ಸಹಿತ ಒಟ್ಟು 103 ಮಂದಿ ಆಡಳಿತ ಮಂಡಳಿ ಸದಸ್ಯರನ್ನು ಸಮಾಜಕ್ಕೆ ಗುರುತಿಸುವ ನೆಲೆಯಲ್ಲಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಕೋಶಾಧಿಕಾರಿ ಹೆಚ್ ಪದ್ಮಗೌಡ ಬೆಳ್ತಂಗಡಿ, ಉಪಾಧ್ಯಕ್ಷ ರಾಮದಾಸ್ ಗೌಡ ಎಸ್, ಬೆಳ್ತಂಗಡಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಮಂಗಳೂರು ಕಾರ್ಯದರ್ಶಿ ಕೆ.ರಾಮಣ್ಣ ಗೌಡ, ಸಂಘದ ಸದಸ್ಯತನ ಅಭಿಯಾನದ ಪುತ್ತೂರು ತಾಲೂಕು ಸಂಚಾಲಕ ಮುರಳೀಧರ ಗೌಡ ಕೆಮ್ಮಾರ ಉಪಸ್ಥಿತರಿದ್ದರು.



