ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ರಾಮನಗರ ಹೆಸರು ತೆಗೆದು, ಬೆಂಗಳೂರು ಸೇರಿಸಿರುವುದೇ ಲ್ಯಾಂಡ್ ಮಾಫಿಯಾ ಕಾರಣಕ್ಕೆ..!??

ಬೆಂಗಳೂರು ಅನ್ನುವ ಪದದಲ್ಲಿ ಲ್ಯಾಂಡ್ ಮಾಫಿಯಾ ಇದೆ. ರಾಮನಗರ ಹೆಸರು ತೆಗೆದು, ಬೆಂಗಳೂರು ಸೇರಿಸಿರುವುದೇ ಲ್ಯಾಂಡ್ ಮಾಫಿಯಾ ಕಾರಣಕ್ಕಾಗಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸುಳ್ಯದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಸುತ್ತಮುತ್ತ ಯಾರು ಲ್ಯಾಂಡ್ ಮಾಫಿಯಾ ನಡೆಸುತ್ತಿದ್ದಾರೆ. ಅವರಿಗೆ ರಾಮನಗರ ಹೆಸರು ಬೇಕಾಗಿಲ್ಲ. ಅವರಿಗೆ ಬೆಂಗಳೂರು ಹೆಸರು ಬೇಕು. ಅವರ ಜಮೀನಿಗೆ ಮೌಲ್ಯ ಬರಬೇಕು. ಈ ಕಾರಣಕ್ಕಾಗಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲಾಗಿದೆ. ಲ್ಯಾಂಡ್ ಮಾಫಿಯಾದ ಶಕ್ತಿಗಳು, ದೊಡ್ಡ ದೊಡ್ಡ ಕುಳಗಳು ಇವತ್ತು ರಾಮನಗರ ಹೆಸರು ತೆಗೆದು ಬೆಂಗಳೂರು ಎಂಬ ಹೆಸರು ಇಡುತ್ತಿದ್ದಾರೆ ಇದರ ಹಿಂದೆ ಲ್ಯಾಂಡ್ ಮಾಫಿಯಾ ಇದೆ. ಇತರ ಹಿಂದೆ ಇರುವುದು ರೈತರ ಜಮೀನು ಕಿತ್ತುಕೊಂಡು, ಬೇರೆಯವರಿಗೆ ಕೊಡುವಂತಹದ್ದು, ಲೇಔಟ್ ಮಾಡುವಂತಹದ್ದು, ಕೈಗಾರಿಕೆಗಳಿಗೆ ಕೊಡುವ ದೊಡ್ಡ ಶಕ್ತಿ, ಷಡ್ಯಂತ್ರ ಇದೆ. ಆದ್ದರಿಂದ ರಾಮನಗರ ಹೆಸರು ಹಾಗಯೇ ಉಳಿದ ಬೇಕು ಎಂದು ನಾನು ಆಗ್ರಹಿಸುವುದಾಗಿ ತಿಳಿಸಿದ ಅವರು, ಆ ಜಿಲ್ಲೆಯವರು ಇದಕ್ಕೆ ಶಕ್ತಿ ನೀಡಬೇಕು ಎಂದು ಆ ಜಿಲ್ಲೆಯ ಜನರಲ್ಲಿ ಆಗ್ರಹ ಮಾಡುತ್ತೇನೆ ಎಂದ್ರು. ಕರ್ನಾಟಕ ರಾಜ್ಯ ಸರಕಾರ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರವನ್ನು ಅವರು ಖಂಡಿಸಿದ್ರು. ಜನೌಷಧಿ ರೋಗಿಗಳಿಗೆ ಮಾತ್ರವಲ್ಲ, ಆಸ್ಪತ್ರೆಗೆ ಬರುವವರು, ಅಕ್ಕಪಕ್ಕದವರಿಗೆ ಪ್ರಯೋಜನವಾಗುತ್ತಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!