ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಾರಂಭವಾದ ದಿನದಿಂದಲೂ ಪೂರ್ಣಪ್ರಮಾಣದ ಸಹಕಾರವನ್ನು ನೀಡಿ ಮಾರ್ಗದರ್ಶನ ಮಾಡುತ್ತಿರುವ, ಹಾಗೂ ಪಟ್ಲ ಸತೀಶ್ ಶೆಟ್ಟಿ ಯವರ ವೃತ್ತಿ ಜೀವನದ ಪ್ರಾರಂಭದಿAದಲೂ ಅವರ ಜೊತೆ ಬಲವಾಗಿ ನಿಂತ ನಮ್ಮ ಟ್ರಸ್ಟಿನ ಪ್ರಧಾನ ಸಂಚಾಲಕರಾದ ಈ ವರ್ಷದ (2025ನೇ) ಮಹಾಪೋಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ಯವರನ್ನು ಅವರ ನಿವಾಸದಲ್ಲಿ ನಮ್ಮ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ ಸತೀಶಣ್ಣನವರು ಕಿನ್ನಿಗೋಳಿ ಘಟಕದ ಪದಾಧಿಕಾರಿಗಳೊಂದಿಗೆ ಭೇಟಿಯಾಗಿ “ಪಟ್ಲ ದಶಮ ಸಂಭ್ರಮ”ದ ಆಮಂತ್ರಣ ಪತ್ರಿಕೆಯನ್ನು ನೀಡಿ ಆತ್ಮೀಯವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಕಿನ್ನಿಗೋಳಿ ಘಟಕದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ದಿವಾಕರ ಕರ್ಕೇರ, ಸಂಚಾಲಕರಾದ ಪ್ರಥ್ವಿರಾಜ್ ಆಚಾರ್ಯ, ಜತೆ ಕೋಶಾದಿಕಾರಿ ದಿನೇಶ್ ಆಚಾರ್ಯ, ಜತೆ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ,ಮಾದ್ಯಮ ಪ್ರತಿನಿಧಿ ಶರತ್ ಶೆಟ್ಟಿ, ನಿಶಾಂತ್ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.



