ವಿಟ್ಲಕಸಬಾ ಗ್ರಾಮದ ನೆಕ್ಕರೆಕಾಡು ನಾರಾಯಣ ನಾಯ್ಕ ಅವರ ಪುತ್ರ ಸಂತೋಷ್ ನಾಯ್ಕ(35) ಶನಿವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯವರು ಬೆಳಗ್ಗೆ ಹೊರಗೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈತ ಒಬ್ಬನೇ ಇದ್ದಾಗ ಮನೆಯೊಳಗೇ ಪಕ್ಕಾಸಿಗೆ ನೇಣು ಬಿಗಿದುಕೊಂಡಿದ್ದು ಸಂಜೆ ಆತನ ತಂದೆ ಮನೆಗೆ ತಲುಪಿ ಗಮನಿಸಿದಾಗ ಆತ ಸಾವನ್ನಪ್ಪಿಯಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.



