ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೋಟ್ಲು ಎಂಬಲ್ಲಿ ರಸ್ತೆಯ ಬದಿಯಲ್ಲಿರುವ ಬೃಹತ್ ಗಾತ್ರದ ಮರವೊಂದು ವಾಲಿ ನಿಂತಿದ್ದು ಅಪಾಯ ಕಾದಿದೆ.

ವಾಲಿ ನಿಂತ ಮರ ರಸ್ತೆಯ ಹೋಗುವ ವಾಹನಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚು ಇದ್ದು, ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಮನವಿಯಾಗಿದೆ. ಕಳೆದ ಒಂದು ವಾರದಿಂದ ಸುರಿಯುವ ಬಾರೀ ಗಾಳಿ ಮಳೆಗೆ ಅಲ್ಲಲ್ಲಿ ಹಾನಿಗಳಾಗಿವೆ.



