ಬೆ0ಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬ್ರಹ್ಮರಕೊಟ್ಲು ಸೇತುವೆಯ ಪುಟ್ ಪಾತ್ ನಲ್ಲಿ ದೊಡ್ಡ ಹೊಂಡವೊAದು ಬಿದ್ದಿದ್ದು, ಸಾರ್ವಜನಿಕರು ಹೋಗದಂತೆ ಕಂದಾಯ ಇಲಾಖೆಯವರು ಬ್ಯಾರಿಕೇಡ್ ಅಳವಡಿಸಿ ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಅತಿಯಾದ ಮತ್ತು ನಿರಂತರವಾಗಿ ಸುರಿಯುವ ಮಳೆಯ ನೀರು ಹರಿದುಹೋಗಲು ಸಾಧ್ಯವಾಗದೆ ಸಿಕ್ಕಸಿಕ್ಕ ಕಡೆಗಳಲ್ಲಿ ಹರಿದುಹೋಗುತ್ತಿದೆ. ಇಲ್ಲೂ ಕೂಡ ಜನರು ನಡೆದುಕೊಂಡು ಹೋಗುವ ಸೇತುವೆಯ ಒಂದು ಭಾಗದಲ್ಲಿ ಹೊಂಡನಿರ್ಮಾಣವಾಗಿ ಅದರೊಳಗೆ ನೀರು ಬೀಳುತ್ತಿದೆ. ಇದು ಅಪಾಯಕಾರಿಯಾಗಿದ್ದು, ಪಾದಾಚಾರಿಗಳು ಅದರ ಮೇಲೆ ಹೋದರೆ ಹೊಂಡದೊಳಗೆ ಬೀಳುವ ಸಾಧ್ಯತೆಗಳಿವೆ. ಹಾಗಾಗಿ ಇಲ್ಲಿ ಯಾರು ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ.



