ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಅನೇಕ ಪ್ರಮಾಣದಲ್ಲಿ ಹಾನಿಯುಂಟಾದ ಘಟನೆ ನಡೆದಿದೆ.

ಹಳೆ ಕಟ್ಟಡದ ಗೋಡೆ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಕುಸಿದು ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ. ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಇದ್ದ ಗೋಡೆ ಇದಾಗಿದ್ದು ಇತ್ತೀಚೆಗೆ ಈ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು ಆದರೆ ಗೋಡೆಯ ಒಂದು ಪಾರ್ಶ್ವವನ್ನು ಹಾಗೇ ಬಿಡಲಾಗಿದ್ದು ಅದೂ ಕೂಡ ಭಾರೀ ಮಳೆಯ ಹಿನ್ನಲೆಯಲ್ಲಿ ಕುಸಿದು ಬಿದ್ದುದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.



