ಭಾರೀ ಮಳೆಗೆ ಪುತ್ತೂರು ನಗರಸಭೆಯ ಕೌಂಪೌ0ಡ್ ಕುಸಿದು ಬಿದ್ದ ಘಟನೆ ನಡೆದಿದ್ದು ಮೂರು ಆಟೋ ರಿಕ್ಷಾದ ಮೇಲೆಯೇ ಕುಸಿದು ಬಿದ್ದ ಬಗ್ಗೆ ವರದಿಯಾಗಿದೆ.

ಕೌಂಪೌ0ಡ್ ಬದಿಯಲ್ಲೇ ಆಟೋ ರಿಕ್ಷಾ ನಿಲ್ದಾಣ ಇರುವುದರಿಂದ ಈ ಅನಾಹುತ ಸಂಭವಸಿದೆ ಎನ್ನಲಾಗಿದೆ. ಇನ್ನು ಈ ಘಟನೆಯಿಂದ ಬಲ್ನಾಡಿನ 3 ಸರ್ವೀಸ್ ಆಟೋ ರಿಕ್ಷಾಗಳು ಜಖಂಗೊ0ಡಿದೆ. ಸದ್ಯ ಆಟೋ ರಿಕ್ಷಾದಲ್ಲಿ ಯಾರೂ ಇಲ್ಲದ ವೇಳೆ ಕೌಂಪೌ0ಡ್ ಕುಸಿದ ಪರಿಣಾಮ ಭಾರೀ ದೊಡ್ಡ ಅನಾಹುತ ತಪ್ಪಿದೆ. ಇನ್ನು ಈ ಘಟನೆ ನಡೆದ ಬೆನ್ನಲ್ಲೇ ಪುತ್ತೂರು ನಗರಸಭೆ ಕೌಂಪೌ0ಡ್ ನ ಕಲ್ಲು ಹಾಗೂ ರಸ್ತೆ ಬದಿ ಬಿದ್ದಿರುವ ಮಣ್ಣು ತೆರವುಗೊಳಿಸುತ್ತಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಸದಸ್ಯ ಸುಂದರ ಪೂಜಾರಿ ಬಡಾವು ಭೇಟಿ ನೀಡಿದ್ದಾರೆ



