ಕರಾವಳಿಯಲ್ಲಿ ಈಗ ಗುಡುಗು ಸಿಡಿಲಿನ ಭಾರೀ ಮಳೆಯಿಂದ ಅನೇಕ ಕಡೆಗಳಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

ಬೆಳಿಗ್ಗೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಪುತ್ತೂರು ಸಮುದಾಯ ಭವನದ ತಡೆಗೋಡೆ ಕುಸಿದಿದೆ. ಮಳೆಯ ಅಬ್ಬರಕ್ಕೆ ಪುತ್ತೂರು ತಾಲೂಕಿನ ಕೆಲವೆಡೆ ತಡೆಗೋಡೆ ಕುಸಿತಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ ಇನ್ನು ಪುತ್ತೂರಿನ ಬಪ್ಪಳಿಗೆ ಸಮೀಪ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಎಲ್ಲಿಯೂ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.



