ಗೂಡ್ಸ್ ಟೆಂಪೋವೊ0ದು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಹಳೆಯಂಗಡಿ ರಿಕ್ಷಾ ಪಾರ್ಕ್ನೊಳಗೆ ನುಗ್ಗಿದ ಪರಿಣಾಮ ಪಾರ್ಕ್ನ ಶೆಲ್ಟರ್ ಮತ್ತು ಎರಡು ಅಂಗಡಿಗಳಿಗೆ ಹಾನಿ ಉಂಟಾದ ಘಟನೆ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ತಡರಾತ್ರಿ ಜೋರಾಗಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಟೆಂಪೋ,ಹೆದ್ದಾರಿಯ ಪಕ್ಕದ ರಿಕ್ಷಾ ಪಾರ್ಕ್ ಹಿಂಭಾಗಕ್ಕೆ ನುಗ್ಗಿದೆ. ಈ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ.



