ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಪದವು ಸೋರ್ನಾಡು ರಾಜ್ಯ ಹೆದ್ದಾರಿಯ ನೂದಬೆಟ್ಟು ಎಂಬಲ್ಲಿ ರಸ್ತೆ ಪಕ್ಕದ ಜಾಗವನ್ನು ಬೂಮಾಲಕರು ಸಮತಟ್ಟು ಮಾಡಿರುವ ಕಾರಣದಿಂದ ಮಳೆಗೆ ಅಲ್ಲಿನ ಮಣ್ಣು ರಸ್ತೆಗೆ ಬಿದ್ದು ಚರಂಡಿ ಮುಚ್ಚಿ ಹೋಗಿ ರಸ್ತೆಯಲ್ಲಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತೀವ್ರ ಅಡಚನೆಯಾಗಿತ್ತು.

ಇದನ್ನು ಗಮನಿಸಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಹಾಗೂ ಸದಸ್ಯರಾದ ಜಗದೀಶ್ ದುರ್ಗಾ ಕೋಡಿ ತಕ್ಷಣ ಸ್ಥಳಕ್ಕೆ ತೆರಳಿ ಜೆಸಿಬಿ ಬಳಸಿ ಮಣ್ಣು ಕಲ್ಲುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿಸಿದರು. 
ಈ ಸಂದರ್ಭ ಪಂಚಾಯತ್ ಸಿಬ್ಬಂದಿ ಶ್ರೀ ಲಕ್ಷ್ಮಣ್ ಅವರು ಸ್ಥಳದಲ್ಲಿ ಇದ್ದು ಸಹಕರಿಸಿದರು,. ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ ಕಾರ್ಯವೈಕರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



