ಮಂಗಳೂರು ನಗರದ ಕೇಂದ್ರ ಬಿಂದು ಎಂದು ಪರಿಗಣಿಸಲ್ಪಟ್ಟಿರುವ ಕಾರ್ ಸ್ಟ್ರೀಟ್ ಮಳೆಯ ನೀರು ಹರಿದು ಹೋಗಲು ಜಾಗವಿಲ್ಲದೆ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಮತ್ತು ಮಳೆ ನೀರು ಹರಿದು ಹೋಗುವ ಚರಂಡಿಗಳಿಗೆ ಕಸ ಹಾಕುವ ಕೆಲ ವಿಘ್ನ ಸಂತೋಷಿಗಳ ಕೃತ್ಯದಿಂದ ಕಾರ್ ಸ್ಟ್ರೀಟ್ ನಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ದಾರಿ ಕಾಣದೆ ರಸ್ತೆಯಲ್ಲಿ ಹರಿಯುತ್ತಿದೆ. ಇನ್ನು ಮಂಗಳೂರಿನ ಪಡೀಲ್ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ಹೋಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸು ನೀರಿನಲ್ಲಿ ಬಾಕಿಯಾಗಿದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ಬಜಾಲ್, ವೀರನಗರ, ಫೈಸಲ್ ನಗರ ಸಂಪರ್ಕಿಸುವ ಅಂಡರ್ ಪಾಸ್ ಇದಾಗಿದೆ.



