ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದುವರಿದ ಭಾರೀ ಮಳೆ ಪರಿಸ್ಥಿತಿ ನಿರ್ವಹಣೆಗೆ ಪುತ್ತೂರಿಗೆ ಆಗಮಿಸಿದ 25 ಸದಸ್ಯರನ್ನೊಳಗೊಂಡ ಎನ್.ಡಿ.ಆರ್.ಎಫ್ ತಂಡ, ಸದ್ಯ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ಎನ್.ಡಿ.ಆರ್.ಎಫ್ ತಂಡ ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಮಾಡಲಾಗಿದೆ.

ಇನ್ನು ಪುತ್ತೂರು ನಗರವನ್ನು ಕೇಂದ್ರವಾಗಿರಿಸಿ ಕಾರ್ಯಾಚರಣೆ ನಡೆಸಲಿರುವ ತಂಡ, ಮಳೆಯಿಂದ ಹೆಚ್ಚು ಹಾನಿಗೊಳಗಾಗುವ ಬೆಳ್ತಂಗಡಿ, ಕಡಬ ಬಂಟ್ವಾಳ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಪರಿಸ್ಥಿತಿ ಅವಲೋಕಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಕೆಲಸ ಮಾಡಲಿದ್ದಾರೆ. ತಂಡದೊAದಿಗೆ ಆಗಮಿಸಿರುವ ಶ್ವಾನ ಕೂಡ ಕಾರ್ಯಾಚರಣೆಯ ವೇಳೆ ಅಪಾಯಕ್ಕೊಳಗಾದ ಜನರನ್ನು ಪತ್ತೆಹಚ್ಚುವ ಕೆಲಸ ಮಾಡಲಿದೆ ಇನ್ನು ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳೊಂದಿಗೆ ಆಗಮಿಸಿರುವ ಎನ್.ಡಿ.ಆರ್.ಎಫ್ ತಂಡ ಎರಡು ಟೀಂ ಆಗಿ ಪುತ್ತೂರು ಹಾಗೂ ಮಡಿಕೇರಿಯಲ್ಲಿ ಕಾರ್ಯಚರಿಸಲಿದೆ.



