ಐಪಿಎಲ್ 2025 ರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಪಂಜಾಬ್ ಕಿಂಗ್ಸ್ 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿದೆ. ಪಂಜಾಬ್ ಕಿಂಗ್ಸ್ ಗೆಲುವಿಗೆ 185 ರನ್‌ಗಳ ಗುರಿ ನೀಡಲಾಗಿತ್ತು. ಶ್ರೇಯಸ್ ಅಯ್ಯರ್ ಪಡೆ 18.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಏಳು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ, ಭಾರತದ ಸ್ಟಾರ್ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ತಮ್ಮ ಬೌಲಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಅರ್ಶ್ದೀಪ್ ಸಿಂಗ್ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಅವರು ನಮನ್ ಧೀರ್ ವಿಕೆಟ್ ಪಡೆಯುವ ಮೂಲಕ ಓವರ್ ಆರಂಭಿಸಿದರು ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಓವರ್ ಮುಗಿಸಿದರು. ಅವರು ಇಡೀ ಓವರ್‌ನಲ್ಲಿ ಕೇವಲ 3 ರನ್‌ಗಳನ್ನು ಮಾತ್ರ ನೀಡಿದರು. ಒಟ್ಟಾರೆಯಾಗಿ ಅರ್ಷ್‌ದೀಪ್ 4 ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿದರು.



