ಬೆಂಗಳೂರು: ಟೊಮ್ಯಾಟೋ ದರ ಹೆಚ್ಚಿಸಿ ಆಯಿತು ಈಗ ಮದ್ಯದ ಸರದಿ! ಹೌದು. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಹೆಚ್ಚಳ ಇಂದಿನಿಂದಲೇ ಜಾರಿಗೆ ಬರಲಿದೆ.
ಶುಕ್ರವಾರದಿಂದ ಗರಿಷ್ಠ ಶೇ.20ರಷ್ಟು ಹೆಚ್ಚಿನ ಹೊಸ ದರದಲ್ಲಿ ಮದ್ಯ ಮಾರಾಟವಾಗಲಿದೆ. ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು ಮದ್ಯದ ಅಧಿಕಾರಿ ಸುಕವನ್ನು ಹೆಚ್ಚಿಸಿದ್ದಾರೆ. ಇದರಿಂದ ಮದ್ಯ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ವಿಸ್ಕಿ, ರಮ್, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ರೀತಿಯ ಭಾರತೀಯ ಮದ್ಯದ ಮೇಲಿನ ಎಲ್ಲಾ ಘೋಷಿತ 18 ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಅಸ್ತಿತ್ವದಲ್ಲಿರುವ ದರಗಳಿಗಿಂತ 20 ಪ್ರತಿಶತದಷ್ಟು ಹೆಚ್ಚಿಸಲಾಗುತ್ತದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 10 ರಷ್ಟು ಏರಿಸಲಿದ್ದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 175 ರಿಂದ ಶೇಕಡಾ 185 ಕ್ಕೆ ಹೆಚ್ಚಿಸಲಾಗಿದೆ.



