ಉಪ್ಪಿನಂಗಡಿ-ಉಪ್ಪಿನ0ಗಡಿ ರಾಜ್ಯ ಹೆದ್ದಾರಿ, ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಬೃಹತ್ ಗಾತ್ರದ ಮಾವಿನ ಮರವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ-800 ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊ0ಡಿದೆ.

ಅದರಲ್ಲಿದ್ದ 3 ಮಂದಿ ಅಪಾಯದ ಅರಿವು ಆಗುತ್ತಿದ್ದಂತೆ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಬ್ದುಲ್ ಸಲಿಂ ಎಂಬವರು ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿ ಹೋಗಿದ್ರು. ಅದರೊಳಗೆ ಅಬ್ದುಲ್ ರಹಿಮಾನ್, ರಮ್ಲಾನ್, ಅಬ್ಬಾಸ್ ಎಂಬವರು ಕುಳಿತು ಮಾತನಾಡಿಕೊಳ್ಳುತ್ತಿದ್ರು. ಅಷ್ಟರಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಮಾವಿನ ಮರ ವಾಲತೊಡಗುವುದನ್ನು ಗಮನಿಸಿದ ಇವರುಗಳು ಅದರಿಂದ ಇಳಿದು ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಸಂಜೆ ಬೀಸಿದ ಗಾಳಿ ಮಳೆಗೆ ಮಾವಿನ ಮರ ಬುಡ ಸಮೇತ ನೆರಕ್ಕುರುಳಿ ಬಿದ್ದಿದ್ದು, 100 ಮೀಟರ್ ದೂರದ ತನಕ ರಸ್ತೆಯಲ್ಲಿ ವಿಸ್ತಾರವಾಗಿ ಬಿದ್ದುಕೊಂಡಿತ್ತು. ಸ್ಥಳೀಯ ಯುವಕರು ಮರ ತುಂಡರಿಸುವ ಯಂತ್ರ ತಂದು ರಸ್ತೆಯನ್ನು ತೆರವುಗೊಳಿಸಿದ್ದಾರೆ. ಬಳಿಕ ಕಾರಿನ ಮೇಲೆ ಇದ್ದ ಮರವನ್ನು ಜೆಸಿಬಿ ಯಂತ್ರದ ಮೂಲಕ ತೆಗೆಯಲಾಯಿತು.



