ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕುಂದಾಪುರ ತಾಲೂಕಿನ ಬಸ್ರೂರು ಸಂತ ಫಿಲಿಪ್ ನೆರಿ ಧರ್ಮಕೇಂದ್ರದ ಡಾ.ಜೋನ್ ಕರ್ವಾಲ್ಲೊ ಅವರು ತಮ್ಮ ಹುಟ್ಟೂರಿನಲ್ಲಿ ಪ್ರಥಮ ಕೃತಜ್ಞಾತಾ ಬಲಿಪೂಜೆ ಅರ್ಪಿಸಿದ್ದಾರೆ. 
ಧಾರಾಕಾರ ಮಳೆಯ ನಡುವೆಯೂ ಸಹ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಹೆನ್ರಿ ಡಿಸೋಜಾ, ಜೈಪುರ್ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಓಸ್ವಲ್ಡ್ ಜೆ ಲೂವಿಸ್, ಕಾರವಾರ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ದುಮಿAಗ್ ಡಯಾಸ್, ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳೊಂದಿಗೆ ಕೃತಜ್ಞಾತಾ ಬಲಿಪೂಜೆಯೊಂದಿಗೆ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನೂತನ ಧರ್ಮಾಧ್ಯಕ್ಷರಾದ ವಂ|ಡಾ|ಜೋನ್ ಕರ್ವಾಲ್ಲೊ ಅವರಿಗೆ ಬಸ್ರೂರು ಸಂತ ಫಿಲಿಪ್ ನೆರಿ ಧರ್ಮಕೇಂದ್ರದ ವತಿಯಿಂದ, ಧರ್ಮಾಧ್ಯಕ್ಷರು ಕಲಿತ ನಿವೇದಿತಾ ಶಾಲೆಯ ಅಧ್ಯಾಪಕ ವೃಂದದವರಿ0ದ ಗೌರವಾರ್ಪಣೆ ನೆರವೇರಿಸಲಾಯಿತು.



