ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಆಂಧ್ರಪ್ರದೇಶದ ಕೆಎನ್‌ಆರ್‌ಸಿ ಕಂಪೆನಿಯ ಬೇಜವಾಬ್ದಾರಿತನದ ಕೆಲಸಗಳಿಂದ ಮಾಣಿ ಸೂರಿಕುಮೇರು ಮಧ್ಯೆ ಹಲವಾರು ಅವಾಂತರಗಳು ಸೃಷ್ಠಿಯಾಗಿದೆ.

ರಾಜ್ ಕಮಲ್ ಹಾಲ್ ಬಳಿ ಮತ್ತು ಟಿಕ್ಕಾ ಪಾಯಿಂಟ್ ಹೋಟೆಲ್ ಸಮೀಪ ಚರಂಡಿಗಳಲ್ಲಿ ತುಂಬಿರುವ ಮಣ್ಣು ತೆಗೆಯದೇ ಇರುವುದರಿಂದ ಮಳೆಯ ನೀರೆಲ್ಲಾ ರಸ್ತೆಯಲ್ಲೇ ತುಂಬಿ ಕೃತಕ ಹೊಳೆ ನಿರ್ಮಾಣವಾಗಿ ವಾಹನ ಸಂಚಾರ ಸುಗಮವಾಗುತ್ತಿಲ್ಲ.



