ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ.
ಇದರ ವತಿಯಿಂದ ನಡೆಯುವ ಅಮೃತ ಪ್ರಕಾಶ 44ನೇ ಸರಣಿ ಕೃತಿ ಶ್ರೀಮತಿ ವಜ್ರ ರಾವ್ ಅವರ ಲೇಖನ ಸಂಕಲನ “ಮರೆಯದ ಮಾತುಗಳು” ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಲೇಖಕರು ಹಾಗೂ ಐಸಿಎಎಲ್ ಮಂಗಳೂರು ಇದರ ಮಾಜಿ ಚೀಯರ್‌ಮಾನ್ ಎಸ್.ಎಸ್. ನಾಯಕ್ ಕೃತಿ ಉದ್ಘಾಟನೆ ಮಾಡಿ ಮಾತನಾಡಿ, ಅಮೃತ ಪ್ರಕಾಶ ಪತ್ರಿಕೆಯ ಮೂಲಕ ಅನೇಕ ಕವಿಗಳ ಪರಿಚಯ ಮತ್ತು ಕೃತಿಗಳ ಲೋಕಾರ್ಪಣೆಯಾಗಿದೆ. ಇಂದು 44 ನೇ ಕೃತಿ ಲೋಕಾರ್ಪಣೆಯಾಗಿದೆ ಈ ಕೃತಿಯಲ್ಲಿ ಕವಿಯ ಅನುಭವನ್ನು ಸರಳವಾಗಿ ಅರ್ಥಭರಿತವಾಗಿ ಹೇಳಲಾಗಿದೆ. ಹಳೆಯ ಆಚಾರ ವಿಚಾರಗಳನ್ನು ಇದರಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಹಾಗೂ ಲೇಖಕರು ಹರಿಕಥಾ ಪರಿಷತ್ (ರಿ), ಮಂಗಳೂರು ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ವಹಿಸಿದ್ರು. ಕೃತಿಯ ಲೇಖಕಿ ಶ್ರೀಮತಿ ವಜ್ರಾ ರಾವ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಕವಿಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ರು
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…