ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು ಜೋಡು ರಸ್ತೆ, ಪಿಲಿಚಂಡಿ ಸ್ಥಾನದಲ್ಲಿ ಹರಿಯುವ ನೀರಿನ ತೋಡಿನಲ್ಲಿ ಹೂಳು ತುಂಬಿ ಜನರ ಜೀವನ ಅಲ್ಲೋಲ ಕಲ್ಲೋಲವಾಗಿದೆ.

ಇಲ್ಲಿನ ಪ್ರದೇಶದಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಹಲವು ವರ್ಷಗಳಿಂದ ತೋಡಿನ ಹೂಳು ತೆರವುಗೊಳಿಸಲು ಹಲವು ಬಾರಿ ಸೂಚಿಸಲಾಗಿತ್ತು. ಅಲ್ಲದೆ, ಈ ವಿಚಾರವನ್ನು ಮೂರು ವರ್ಷಗಳಿಂದ ಗ್ರಾಮ ಪಂಚಾಯತ್ ಗಮನಕ್ಕೆ ತರಲಾಗಿತ್ತು. ಅದನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ತೋಡಿನ ಹೂಳು ಎತ್ತಿಲ್ಲ. ಎರಡು ವರ್ಷಗಳಲ್ಲಿ ನೆರೆ ಬಂದು ಮನೆಯೊಳಗೆ ನೀರು ಪ್ರವೇಶಿಸಿ ಜನರ ಜೀವನ ಪರದಾಡುವಂತಾಗಿತ್ತು, ಅದೇ ರೀತಿ ಈ ಬಾರಿಯೂ ಇಲ್ಲಿನ ಮನೆಗಳಲ್ಲಿ ನೀರು ಹೋಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.

ಮನೆಯ ಒಳಗೆ ನೀರು ತುಂಬಿ ಜೊತೆಗೆ ಅಪಾರ ವಸ್ತುಗಳು ಹಾನಿಯಾಗಿದೆ. ಸುಮಾರು ಮನೆಯ ಒಳಗೆ ನೀರು ತುಂಬಿದ್ದು, ಮನೆಯ ಮಂದಿಗೆ ಮನೆಯಿಂದ ಹೊರಬರಲೂ ಸಾಧ್ಯವಿಲ್ಲದಂತಾಗಿದೆ. ಈ ಮನೆಯಲ್ಲಿ ಸುಮಾರು ಹದಿನೈದು ಸಣ್ಣ ಸಣ್ಣ ಮಕ್ಕಳೇ ಇದ್ದು, ಮನೆಯು ನೀರಿನಿಂದ ತುಂಬಿ ರಸ್ತೆಯಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಜೀವನ ಜೊತೆಯೂ ಸರಕಾರದ ಆಟ ಎಂಬ0ತೆ ಮನೆ ಹಾಗೂ ಮಕ್ಕಳ ಪಾಡನ್ನು ಕೇಳುವವರಿಲ್ಲ…ಮನೆಯ ಹತ್ತಿರದಲ್ಲಿಯೂ ಯಾವುದೇ ರೀತಿಯ ನೀರು ಹೋಗುವ ವ್ಯವಸ್ಥೆಯಿಲ್ಲದೆ, ರಸ್ತೆ ಬದಿಯಲ್ಲಿ ಮಾತ್ರ ನೀರು ಹೋಗುವ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.ಮೂರು ವರ್ಷದಿಂದ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಈ ಸಾಮಾನ್ಯ ಜನರ ಜೀವನದ ಜೊತೆಗೆ ಚೆಲ್ಲಾಟ ಆಡುವ ಬದಲು ಆದಷ್ಟು ಬೇಗ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿ ಈ ಮೂಲಕ ಗ್ರಾಮಸ್ಥರು ವಿನಂತಿಸಿಕೊ0ಡಿದ್ದಾರೆ.



