GOLDEN BOOK OF WORLD RECORDS ನಲ್ಲಿ ಮಹತ್ವದ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಗಾನ ಗಂಧರ್ವ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಅವರ ಜನ್ಮದಿನೋತ್ಸವದ ಪ್ರಯುಕ್ತ ಗಾಯಕ ಯಶವಂತ ಎಂ.ಜಿ ಯಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಬಾಲಗಾನ ಯಶೋಯಾನ ಸಂಗೀತ ಕಾರ್ಯಕ್ರಮವು ಜೂ.3ರಂದು ಸಂಜೆ 3ರಿಂದ ಮರುದಿನ ಸಂಜೆ 3ರ ತನಕ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಗಾಯಕ ಯಶವಂತ್ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕನ್ನಡ ನಾಡಿನ ಖ್ಯಾತ ಸ್ವರ ಮಾಂತ್ರಿಕ ದಿವಂಗತ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ರವರ ಜೊತೆಗಿನ ಒಡನಾಟ ಸ್ಪರಣೀಯವಾಗಿದೆ. ಕಾರ್ಯಕ್ರಮದಲ್ಲಿ ಏಕಾಂಗಿಯಾಗಿ ಸಂಗೀತ ಹಾಡಲಿದ್ದೇನೆ. ಎಸ್ ಪಿ ಬಿಯವರ ಕನ್ನಡದ 240 ಹಾಡುಗಳನ್ನು ನಾನು ಆಯ್ಕೆ ಮಾಡಿ ಹಾಡಲಿದ್ದೇನೆ. ಇಡೀ ವಿಶ್ವದಲ್ಲೇ ಯಾರು ಕೂಡ ಈ ರೀತಿಯ ಸಾಧನೆಯನ್ನು ಮಾಡಿಲ್ಲ , ಈ ಸಾಧನೆಯನ್ನು ಮಾಡಿ ಅವರಿಗೆ ಗೌರವವನ್ನು ಸೂಚಿಸುವುದು ನಮ್ಮ ತಂಡದ ಉದ್ದೇಶವಾಗಿದೆ . ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮವು ಮೆರುಗನ್ನು ಪಡೆಯಲಿದೆ ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಸಾಲಿಯಾನ್, ಮಾಜಿ ಮನಪಾ ಸದಸ್ಯ ಜಗದೀಶ್ ಉಪಸ್ಥಿತರಿದ್ರು.



