ರಹೀಂ ಹತ್ಯೆ ಮಾಡಿರುವುದು ಸರಿಯಲ್ಲ, ದ್ವೇಷ ಭಾಷಣವನ್ನು ಮಾಡಿದವರನ್ನು ಮೊದಲು ಬಂಧಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಹನೀಫ್ ಖಾನ್ ಆಗ್ರಹಿಸಿದ್ದಾರೆ.
ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹತ್ಯೆ ಆದವನಿಗೆ ರಾಜ್ಯ ಸರಕಾರ ಪರಿಹಾರವನ್ನು ನೀಡಬೇಕು. ಆಸ್ಪತ್ರೆಯ ಗಾಯಾಳುವಿಕೆ ಚಿಕಿತ್ಸಾ ವೆಚ್ಚವನ್ನು ಸರಕಾರ ಬರಿಸಬೇಕು. ಸರಕಾರದ ಗೃಹ ಇಲಾಖೆಯ ವೈಫಲ್ಯವು ಈ ಕೃತ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.



