ಮಂಗಳೂರು ಸೆಂಟ್ರಲ್ ರೈಲ್ವೇ ಪರಿಸರದಲ್ಲಿ ಮಳೆಯಿಂದಾಗಿ ರೈಲ್ವೇ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಮೊರ್ಗನ್ ಗೇಟ್ ಪರಿಸರದಲ್ಲಿ ಮರ ಬಿದ್ದಿದ್ದು ಇದರಿಂದ 4-5 ತಾಸು ರೈಲು ಹೊರಡುವುದು ವಿಳಂಬ ಆಯಿತು.

ಮುಂಜಾನೆ ಚರ್ವತ್ತೂರುನಿಂದ ಮಂಗಳೂರು ಸೆಂಟ್ರಲ್‌ಗೆ ಸಂಚರಿಸಿದ ರೈಲು ಗಾಡಿ ಉಳ್ಳಾಲದವರೆಗೂ ಮಾತ್ರ ಸಂಚರಿಸಿತು. ಪಾಲಕ್ಕಾಡ್ ಭಾಗದಿಂದ ಬರುವ ಸಂಚಾರಿ ರೈಲುಗಳು ಮಂಗಳೂರು ಸೆಂಟ್ರಲ್‌ವರೆಗೆ ತನ್ನ ಸಂಚಾರವನ್ನು ಮೊಟಕುಗೊಳಿಸಿತು. ಹೀಗಾಗಿ ಜನರು ವ್ಯಾಪಕವಾಗಿ ಮಳೆಯ ಕಿರಿಕಿರಿಯ ನಡುವೆ ತೊಂದರೆ ಅನುಭವಿಸುವಂತೆ ಆಯ್ತು. ಪಾಲಕ್ಕಾಡ್ ರೈಲ್ವೇ ಅಧಿಕಾರಿಗಳ ಮೂಲಕ ಮಂಗಳೂರು ಸೆಂಟ್ರಲ್ ಭಾಗದಿಂದ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.



