ಉಡುಪಿ: ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ನಿಖಿತಾ ಕುಟುಂಬಕ್ಕೆ 20 ಲಕ್ಷ ರೂ. ಗಳ ಪರಿಹಾರವನ್ನು ಹಸ್ತಾಂತರಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು, ಕುಟುಂಬದವರ ನೋವಿಗೆ ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳ ಸ್ಪಂದನೆ ಶ್ಲಾಘನೀಯ.
ಈ ಪರಿಹಾರವು ನಿಖಿತಾ ಅವರ ಪೋಷಕರಿಗೆ ಸಾಂತ್ವಾನ ನೀಡದಿದ್ದರೂ ಮಗಳಿಗೆ ಕಟ್ಟಿದ ಹೊಸ ಮನೆಯ ಸಾಲ ತೀರಿಸಲು, ಬೇರೆ ಮಕ್ಕಳಿಲ್ಲದ ಕಾರಣ ಮುಂದಿನ ಜೀವನಕ್ಕೆ ಆಸರೆ ಆಗಲು ಸಹಾಯವಾಗಬಹುದು. ಇದೊಂದು ನ್ಯಾಯಯುತ ಹೋರಾಟವಾಗಿದ್ದು, ಸಮುದಾಯ ಸಂಘಟನೆಗಳ ಮನವಿಗೆ ಜಯ ಸಿಕ್ಕಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.



