ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ನಡೆಸುತ್ತಿರುವ ಕಂಪೆನಿಯು ಮಾಣಿ ಹೈಸ್ಕೂಲ್ ಬಳಿ ಸರ್ವಿಸ್ ರಸ್ತೆಗೆ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸದ ಕಾರಣ ನಿರಂತರ ಸುರಿಯುತ್ತಿರುವ ಮಳೆಗೆ ಗುಡ್ಡ ಕುಸಿದು ಮಣ್ಣುಗಳೆಲ್ಲಾ ರಸ್ತೆಯ ಮೇಲೆ ತುಂಬಿ ನಿಂತಿದೆ.

ಸರಿಯಾದ ರೀತಿಯಲ್ಲಿ ಕಾಮಗಾರಿಗಳು ನಡೆಸದೆ ಬೇಜವಾಬ್ದಾರಿತನದ ಕೆಲಸ ಮಾಡುತ್ತಾ ಹೋಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಈ ರೀತಿಯ ತೊಂದರೆಗಳು ಉಂಟಾಗುತ್ತಿದೆ. ಅಗತ್ಯವಿರುವ ಕಡೆ ತಡೆಗೋಡೆ ಅರ್ಧಂಬರ್ಧ ಮಾಡಿ ಹೋಗುವುದು ಮತ್ತು ತಡೆಗೋಡೆ ನಿರ್ಮಿಸದೇ ಬಿಡುವುದರಿಂದಲೂ ಹಲವಾರು ಮನೆಗಳು, ಕರೆಂಟ್ ಕಂಬಗಳು ಕುಸಿದು ಬೀಳುವ ಹಂತದಲ್ಲಿದೆ. ಇವರನ್ನು ವಿಚಾರಿಸಬೇಕಾದವರ ಮೌನವು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



