ಮಳೆಯ ಆರ್ಭಟ ನಿಲ್ಲದೆ ಇರುವುದರಿಂದ ನಿರಂತರವಾಗಿ ತಾಲೂಕಿನ ಅನೇಕ ಕಡೆಗಳಲ್ಲಿ ಮಳೆಹಾನಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ಎಂಬಲ್ಲಿ ಉಮಾವತಿ ಅವರ ವಾಸದ ಮನೆಗೆ ಪಕ್ಕದ ಗುಡ್ಡ ಜರಿದು ಬಾಗಶಃ ಹಾನಿಯಾಗಿದ್ದು, ಮನೆಯವರನ್ನು ಅವರ ಸಂಬ0ಧಿಕರ ಮನೆಗೆ ಸ್ಥಳಾಂತರ ಮಾಡಲಾಯಿತು. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಮಾಣಿಲ ಗ್ರಾಮದ ಕೊಂದಲಕೋಡಿ ಗಿರೀಶ ರವರ ಮನೆಯ ಹಿಂಬದಿಗೆ ಗುಡ್ಡ ಕುಸಿದು ಹಾನಿಯಾಗಿರುತ್ತದೆ.

ವಿಟ್ಲ ಮುಡ್ನೂರು ಕಂಬಳಬೆಟ್ಟು ನಿವಾಸಿ ಹಾಜಿರ ಅವರ ಮನೆಗೆ ಭಾಗಷ ಹಾನಿ. ಯಾವುದೇ ಪ್ರಾಣ ಹಾನಿಯಿಲ್ಲ. ವಿಟ್ಲ ಮುಡ್ನೂರು ಕಂಬಳಬೆಟ್ಟು ಶಾಂತಿ ನಗರ ನಿವಾಸಿ ನೆಬಿಸ ರವರ ವಾಸದ ಮನೆಗೆ ಭಾಗಷ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿಯಿಲ್ಲ. ಕರೊಪಾಡಿ ಗ್ರಾಮ ದ ಓಡಿಯೂರು ನಿವಾಸಿ ಹರಿನಾಕ್ಷಿ ಎಂಬವರ ಹಂಚಿನ ಮನೆಯ ಚಾವಣಿ ಕುಸಿದು ತೀವ್ರ ಹಾನಿಯಾಗಿದ್ದು ಕುಟುಂಬವನ್ನು ಸ್ಥಳಾಂತರ ಮಾಡಲಾಗಿದೆ. ಯಾವುದೇ ಪ್ರಾಣ ಹಾನಿಯಿಲ್ಲ. ವಿಟ್ಲ ಮುಡ್ನೂರು ನೂಜಿ ನಿವಾಸಿ ಹಾಜಿರಾರವರ ಮನೆಯ ಮಣ್ಣಿನ ಗೋಡೆ ಕುಸಿದು ಹಾನಿ.

ಯಾವುದೇ ಪ್ರಾಣ ಹಾನಿಯಿಲ್ಲ ಅಮ್ಮುಂಜೆ ಗ್ರಾಮದ ಸುಲೋಚನ ಎಂಬವರ ಮನೆಯ ಮೇಲ್ಛಾವಣಿ ಕುಸಿದಿದೆ. ಬಂಟ್ವಾಳ ತಾಲ್ಲೂಕು ನರಿ ಕೊಂಬು ಗ್ರಾಮದ ಇಬ್ರಾಹಿಂ ಅವರ ಮನೆಯ ಹಿಂದಿನ ಗುಡ್ಡ ಕುಸಿಯುವ ಭೀತಿ ಇದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರೊಂದಿಗೆ ಜಂಟಿಯಾಗಿ ಸ್ಥಳ ಭೇಟಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಯಿತು. ಕಡೇಶ್ವಾಲ್ಯ ಗ್ರಾಮದ ಸೇರಾ ತನಿಯಪ್ಪ ರವರ ಮನೆಯ ಪಕ್ಕದ ಗುಡ್ಡೆಯ ಮಣ್ಣು ಕುಸಿದಿದ್ದು ಯಾವುದೇ ಹಾನಿ ಇರುವುದಿಲ್ಲ ಎಂದು ಕಂದಾಯ ಇಲಾಖೆ ಪ್ರಕಟನೆ ತಿಳಿಸಿದೆ.



